ಸುಳ್ಯ; ಅಜ್ಮೀರ್ ಝಿಯಾರತ್ ಗೆ ತೆರಳಿದ್ದ ಮದರಸಾ ವಿದ್ಯಾರ್ಥಿ ಮೃತ್ಯು

ಸುಳ್ಯ;ಮದರಸಾ ವಿದ್ಯಾರ್ಥಿಯೋರ್ವ ಉಸಿರುಕಟ್ಟಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ.

ಸುಳ್ಯದ ಕರೀಂಬಿಲ ನಿವಾಸಿ ಇಬ್ರಾಹೀಂ ಸಖಾಫಿ ಅವರ ಪುತ್ರ ಸಿದ್ದೀಕ್ ಮೃತರು.

ಸಿದ್ದೀಕ್ ಅವರು ಕರ್ನಾಟಕ ಸುನ್ನೀ ಪ್ರಮುಖ ನೇತಾರರು ಅಲ್ ಮದೀನಾ ಮೂಡಡ್ಕ ಪ್ರಿನ್ಸಿಪಾಲ್ ಆಗಿರುವ ಶೈಖುನಾ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಅವರ ಶಿಷ್ಯರಾಗಿದ್ದಾರೆ.

ಇವರು ಕೇರಳದ ಕುಟ್ಯಾಡಿಯಲ್ಲಿ ಮದರಸಾ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು.ಇವರು ಸ್ನೇಹಿತರ ಜೊತೆ ಅಜ್ಮೀರ್ ಝಿಯಾರತ್ ಗೆ ತೆರಳಿದ್ದಾಗ ದಿಡೀರ್ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್