ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷವನ್ನು ತಿಂದು ಹಾಕಿದ ಗೆದ್ದಲು

ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷವನ್ನು ತಿಂದು ಹಾಕಿದ ಗೆದ್ದಲು

ಲಕ್ನೋ:ತಾಯಿಯೊಬ್ಬಳು ಮಗಳ ಮದುವೆಗೆಂದು ಜೋಪಾನವಾಗಿ ಕೂಡಿಟ್ಟ 18 ಲಕ್ಷ ರೂ. ಹಣವು ಬ್ಯಾಂಕ್‌ನ ಲಾಕರ್‌ನಲ್ಲಿ ಗೆದ್ದಲು ಹಿಡಿದು ನಾಶವಾಗಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ ನಿಂದ ವರದಿಯಾಗಿದೆ.

ಅಲ್ಕಾ ಪಠಾಕ್‌ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ಯಾಂಕ್‌ವೊಂದರಲ್ಲಿ 18 ಲಕ್ಷ ರೂ.ಗಳನ್ನು ಇಟ್ಟಿದ್ದರು.

ಅಲ್ಕಾ ಪಾಠಕ್ ಅವರು ಬ್ಯಾಂಕ್ ವೊಂದರ ರಾಮಗಂಗಾ ವಿಹಾರ್ ಶಾಖೆಯ ಲಾಕರ್‌ನಲ್ಲಿ ಚಿನ್ನಾಭರಣಗಳ ಜೊತೆಗೆ ಹಣವನ್ನು ಇರಿಸಿದ್ದರು. ಅವರು ತಮ್ಮ ಮಗಳ ಮದುವೆಗಾಗಿ ಹಣವನ್ನು ಇಟ್ಟಿದ್ದರು ಎಂದು ವರದಿಯಾಗಿದೆ.

ಇತ್ತೀಚಿಗೆ ಬ್ಯಾಂಕ್‌ ಸಿಬಂದಿ ಲಾಕರ್‌ ಅಗ್ರಿಮೆಂಟ್‌ ರಿನೀವಲ್‌ಗೆ ಎಂದು ಅಲ್ಕಾ ಅವರಿಗೆ ಕರೆ ಮಾಡಿ ಬರಲು ಹೇಳಿದ್ದಾರೆ. ಈ ವೇಳೆ ಲಾಕರ್‌ ತೆರೆದರೆ ನೋಟುಗಳಿಗೆ ಗೆದ್ದಲು ಹಿಡಿದಿರುವುದು ಬಹಿರಂಗವಾಗಿದೆ.

ಈ ನಷ್ಟದ ಬಗ್ಗೆ ಬ್ಯಾಂಕ್‌ನ ಮುಖ್ಯ ಕಚೇರಿಗೆ ತಿಳಿಸಿರುವುದಾಗಿ ಸಿಬಂದಿ ಹೇಳಿದ್ದು, ತನಗಾದ ನಷ್ಟಕ್ಕೆ ಬ್ಯಾಂಕ್‌ನವರೆ ಪರಿಹಾರ ನೀಡಬೇಕೆಂದು ಮಹಿಳೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್