ಯುವತಿಯನ್ನು ವಿವಾಹವಾದ ಯುವತಿ; ಅಪರೂಪದ ಘಟನೆ

ಲಕ್ನೋ:ಪರಸ್ಪರ ಪ್ರೀತಿಸುತ್ತಿದ್ದ‌ ಸಲಿಂಗಿ ಜೋಡಿ ಸಾಂಪ್ರದಾಯಿಕವಾಗಿ ವಿವಾಹವಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಜಯಶ್ರೀ ರಾಹುಲ್ (28) ಮತ್ತು ರಾಖಿ ದಾಸ್ (23) ಮದುವೆಯಾದ ಜೋಡಿ.

ಜಯಶ್ರೀ ರಾಹುಲ್‌ ಹಾಗೂ ರಾಖಿ ದಾಸ್ ಡಿಯೋರಿಯಾದಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಈ ಜೋಡಿಗೆ ಕೆಲವು ದಿನಗಳ ಹಿಂದೆ ದೀರ್ಗೇಶ್ವರನಾಥ ದೇವಸ್ಥಾನದಲ್ಲಿ ಮದುವೆಗೆ ಅನುಮತಿಯನ್ನು ಕೋರಲಾಗಿತ್ತು. ಆದರೆ ದೇವಸ್ಥಾನದಲ್ಲಿ ಅನುಮತಿ ನಿರಾಕರಿಸಿದ್ದರು. ಇದಾದ ಬಳಿಕ ಆರ್ಕೆಸ್ಟ್ರಾ ತಂಡದ ಮಾಲೀಕ ಮನ್ನಾ ಪಾಲ್‌ ಮದುವೆಗೆ ನೋಟರೈಸ್ ಮಾಡಿದ ಅಫಿಡವಿಟ್ ಪಡೆದುಕೊಂಡಿದ್ದಾರೆ.

ಇನ್ನು ನೋಟರಿ ಪ್ರಮಾಣ ಪತ್ರವನ್ನು ಪಡೆದುಕೊಂಡ ನಂತರ ಇದೀಗ ಡಿಯೋರಿಯಾದ ಭಟ್ಪರ್ ರಾಣಿಯ ಭಗದಾ ಭವಾನಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.

ಟಾಪ್ ನ್ಯೂಸ್