ಚಲಿಸುತ್ತಿರುವ ಬಸ್ಸಿನಲ್ಲೇ ಕಂಡಕ್ಟರ್ ಓರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಘಟನೆ ಲಕ್ನೋದಲ್ಲಿ ನಡೆದಿದೆ.
ಲಕ್ನೋಗೆ ತೆರಳುತ್ತಿದ್ದ ಹತ್ರಾಸ್ ಡಿಪೋದ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಂಡಕ್ಟರ್ ಬಸ್ ಹಿಂಬದಿ ಸೀಟಿನಲ್ಲಿ ನಡೆಸುವ ರಾಸಲೀಲೆಯನ್ನು ಇತರ ಪ್ರಯಾಣಿಕರು ನೋಡಿದ್ದಾರೆ.
ಕಂಡಕ್ಟರ್ ವರ್ತನೆ ವಿಚಿತ್ರವಾಗಿ ಕಾಣುತ್ತಿದ್ದರಿಂದ ಪ್ರಯಾಣಿರೊಬ್ಬರು ಮೊಬೈಲ್ ನಲ್ಲಿ ಇದನ್ನು ಚಿತ್ರೀಕರಣ ಮಾಡಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಕಂಬಳಿಯೊಳಗೆ ಮಹಿಳೆಯೊಬ್ಬರೊಂದಿಗೆ ಕಂಡಕ್ಟರ್ ಲೈಂಗಿಕ ಕ್ರಿಯೆಯನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಪ್ರಯಾಣಿಕ ವಿಡಿಯೋ ಮಾಡುತ್ತಿರುವಾಗಲೇ ಕಂಡಕ್ಟರ್ ಎಚ್ಚೆತ್ತುಕೊಂಡು ಕಂಬಳಿಯಿಂದ ಮಾನ ಮುಚ್ಚಿಕೊಂಡು ಗೊಂದಲಕ್ಕೆ ಒಳಗಾಗಿದ್ದಾನೆ.ಇದನ್ನು ನೋಡಿದ ಇತರ ಪ್ರಯಾಣಿಕರು ದುರ್ವರ್ತನೆ ಬಗ್ಗೆ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಈ ಘಟನೆ 10 ದಿನಗಳ ಹಿಂದೆ ನಡೆದಿದೆ ಎಂದು ಕೆಲ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಈ ಘಟನೆ ವಿಡಿಯೊ ವೈರಲ್ ಬಳಿಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಚಾಲಕ ಮತ್ತು ಕಂಡಕ್ಟರ್ ಇಬ್ಬರನ್ನು ಕೂಡ ಕೆಲಸದಿಂದ ವಜಾಗೊಳಿಸಿದೆ.