ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ 100ರೂ.ಇಳಿಕೆ

ನವದೆಹಲಿ;ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆಯನ್ನು ನವೀಕರಿಸಲಾಗಿದೆ.ಅಡುಗೆ ಅನಿಲ ಸಿಲಿಂಡರ್ ಗಳ ದರ ಇಳಿಕೆ‌ ಮಾಡಲಾಗಿದೆ.

ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ.ಗೆ ಇಳಿಸಲಾಗಿದೆ.

ದೇಶದ ರಾಜಧಾನಿ ನವದೆಹಲಿಯಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 1680 ರೂ.ಗೆ ಇಳಿದಿದೆ.

ಜುಲೈನಲ್ಲಿ ಸಿಲಿಂಡರ್ ಬೆಲೆ ಏರಿಕೆಯಾದ ನಂತರ ಮೊದಲ ಬಾರಿಗೆ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು (ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ) 100 ರೂ. ಇಳಿಸಿದೆ.

ಇದರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ಈಗ 1680 ರೂ.ಆಗಿದೆ. ಇದಕ್ಕೂ ಮೊದಲು 1780 ರೂ.ಇತ್ತು. ಇನ್ನು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಟಾಪ್ ನ್ಯೂಸ್