ಪ್ರೇಮಿಗಳ ದಿನದ ಹಿನ್ನೆಲೆ; ಪಾರ್ಕ್ ನಲ್ಲಿ ಕುಳಿತಿದ್ದ ದಂಪತಿಯನ್ನು ಬೆನ್ನಟ್ಟಿದ ಭಜರಂಗದಳದ ಕಾರ್ಯಕರ್ತರು

ಗಾಂಧಿನಗರ:ಪಾರ್ಕ್ ನಲ್ಲಿ ಕುಳಿತಿದ್ದ ದಂಪತಿ ಮೇಲೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ನಡೆದಿದೆ.

ಪ್ರೇಮಿಗಳ ದಿನಾಚರಣೆ ತಡೆಯಲು ಸೆಂಟ್ರಲ್ ವಿಸ್ಟಾ ಗಾರ್ಡನ್ ಒಳಗಡೆ ತೆರಳಿದ ಭಜರಂಗದಳದ ಕಾರ್ಯಕರ್ತರ ಗುಂಪು ದಂಪತಿ ಮೇಲೆ ದಾಳಿ ನಡೆಸಿದ್ದು, ಅಲ್ಲಿಂದ ಅವರನ್ನು ಬೆನ್ನಟ್ಟಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಪ್ರೇಮಿಗಳ ದಿನದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಭಜರಂಗದಳ ಕಾರ್ಯಕರ್ತರಿಗೆ ಸಮನ್ಸ್ ನೀಡಲಾಗಿದೆ‌.

ಭಜರಂಗದಳ ಕಾರ್ಯಕರ್ತರು ದೊಣ್ಣೆಗಳೊಂದಿಗೆ ಘೋಷಣೆ ಕೂಗುತ್ತಾ ಪಾರ್ಕ್ ನಲ್ಲಿ ಕುಳಿತಿದ್ದ ದಂಪತಿಯನ್ನು ಓಡಿಸಿರುವ ದೃಶ್ಯ ಕೂಡ ವೈರಲ್ ಆಗಿದೆ.

ನಾವು ಯಾರಿಗೂ ಕಿರುಕುಳ ನೀಡಿಲ್ಲ,ಜನರು ಇಂದು ಪ್ರೀತಿಯ ಹೆಸರಿನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಇದರಿಂದ ನಾವು ಈ ರೀತಿ ಮಾಡಿದ್ದೇವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com