ಸಂಸತ್ತಿನ ಸಿಬ್ಬಂದಿಗಳ ಸಮವಸ್ತ್ರದಲ್ಲಿ “ಕಮಲ” ಚಿಹ್ನೆ

ನವದೆಹಲಿ:ಭಾರತದ ಸಂಸತ್‌ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ‘ಕಮಲ’ದ ಚಿತ್ರವನ್ನು ಮುದ್ರಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ ಟೀಕಿಸಿದೆ.

ಸಂಸತ್ ನ್ನು ಏಕಪಕ್ಷೀಯವಾಗಿ ಮಾಡಲು ಬಿಜೆಪಿ ಹೊರಟಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸಿಬ್ಬಂದಿಯ ಸಮವಸ್ತ್ರದ ಮೇಲೆ ಕಮಲದ ಚಿತ್ರವನ್ನೇ ಯಾಕೆ ಮುದ್ರಿಸಲಾಗಿದೆ. ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲವೇ? ರಾಷ್ಟ್ರೀಯ ಪಕ್ಷಿ ನವಿಲಿನ ಚಿತ್ರವನ್ನು ಯಾಕೆ ಮುದ್ರಿಸಿಲ್ಲ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಚೇತಕ ಮಾಣಿಕಂ ಟ್ಯಾಗೋರ್‌ ಪ್ರಶ್ನಿಸಿದ್ದಾರೆ.

ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕಮಲ ಮಾತ್ರ ಯಾಕೆ? ನವಿಲು ಅಥವಾ ಹುಲಿಯ ಚಿತ್ರ ಯಾಕಿಲ್ಲ? ಅವು ಬಿಜೆಪಿ ಪಕ್ಷದ ಚಿಹ್ನೆಗಳು ಅಲ್ಲ. ಓಂ ಬಿರ್ಲಾ ಅವರೇ, ಇಷ್ಟೊಂದು ಅಧೋಗತಿಗೆ ಇಳಿದಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಅವರು ಎಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ. ಇದು ದುರದೃಷ್ಟಕರ ಎಂದು ಹೇಳಿದ ಟ್ಯಾಗೋರ್‌ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ವರದಿಯ ಪ್ರಕಾರ ರಾಜ್ಯಸಭೆ ಮತ್ತು ಲೋಕಸಭೆಯ ಎರಡೂ ಸದನಗಳ ಸಿಬ್ಬಂದಿಗಳ ಸಮವಸ್ತ್ರದಲ್ಲಿ ಕಮಲದ ಚಿಹ್ನೆ ಮುದ್ರಿಸಲಾಗುತ್ತದೆ.

ಟಾಪ್ ನ್ಯೂಸ್