2 ಕೋಟಿ ಲಾಟರಿ ಗೆದ್ದ ತಕ್ಷಣ ಪತಿ & ಮಕ್ಕಳನ್ನು ಬಿಟ್ಟು ಪೊಲೀಸ್ ಜೊತೆ ಪರಾರಿಯಾದ ಮಹಿಳೆ; ಸಂಸಾರವನ್ನು ಒಡೆದ ಲಾಟರಿ ಹಣ!

ಲಾಟರಿಯಲ್ಲಿ 2.9 ಕೋಟಿ ರೂ.ಗಳಷ್ಟು ಹಣ ಗೆದ್ದ ಬಳಿಕ 20 ವರ್ಷ ಸಂಸಾರ ನಡೆಸಿದ ಪತಿಯನ್ನು ಬಿಟ್ಟು ಪತ್ನಿ ಬೇರೊಬ್ಬನ‌ ಜೊತೆ ಓಡಿ ಹೋಗಿ ವಿವಾಹವಾಗಿದ್ದು, ಲಾಟರಿ ಹಣ ಸಂಸಾರವನ್ನೇ ಒಡೆದು ಹಾಕಿದೆ.

ಥಾಯ್ಲೆಂಡ್ ನಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಪತ್ರಿಕೆ ‘ಥಾಯ್ಗರ್‌’ ವರದಿ ಮಾಡಿರುವ ಪ್ರಕಾರ 47 ವರ್ಷ ವಯಸ್ಸಿನ ನಾರಿನ್ ತನ್ನ ಮಡದಿ ವಿರುದ್ಧ ಮಾರ್ಚ್ 11 ರಂದು ಈ ಸಂಬಂಧ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಆಪಾದಿತೆ ಮಹಿಳೆ ಚಾವೀವಾನ್‌ ಜೊತೆ 20 ವರ್ಷದ ಹಿಂದೆಯೇ ಮದುವೆಯಾಗಿರುವ ನಾರಿನ್‌ಗೆ ಮೂವರು ಮಕ್ಕಳು ಕೂಡ ಇದ್ದಾರೆ.

ಸಾಲ ಇದ್ದ ಕಾರಣ 2014 ರಲ್ಲಿ ನಾರಿನ್‌ ದಕ್ಷಿಣ ಕೊರಿಯಾಗೆ ತೆರಳಿ ಅಲ್ಲಿ ದುಡಿಯುತ್ತಿದ್ದರು. ಪ್ರತಿ ತಿಂಗಳು ಮನೆಗೆ 27,000-30,000 ಭಾಟ್‌ಗಳನ್ನು ಈತ ತನ್ನ ಮಡದಿ ಚಾವೀವಾನ್‌ಗೆ ಕಳುಹಿಸಿ, ಕುಟುಂಬದ ಪಾಲನೆಗೆ ನೆರವಾಗುತ್ತಿದ್ದ.

ಈ ಮಧ್ಯೆ ಚಾವೀವಾನ್ ಗೆ ಲಾಟರಿ ಹೊಡೆದಿತ್ತು. ಆದರೆ ಆಕೆ ಅದನ್ನು ಹೇಳಿರಲಿಲ್ಲ.ಆತನ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ.ಪತ್ನಿ ಕರೆಗಳಿಗೆ ಸ್ಪಂದಿಸುವುದನ್ನು ನಿಲ್ಲಿಸಿದ ಬಳಿಕ ಏನಾಗಿದೆ ಎಂದು ಅರಿಯಲು ಮಾರ್ಚ್ 3ರಂದು ನಾರಿನ್ ಥಾಯ್ಲೆಂಡ್‌ಗೆ ಮರಳಿದ್ದಾರೆ. ಫೆಬ್ರವರಿ 25ರಂದೇ ತನ್ನ ಮಡದಿ ಪೊಲೀಸ್‌ ಸಿಬ್ಬಂದಿಯೊಬ್ಬನೊಂದಿಗೆ ಮದುವೆಯಾಗಿರುವ ಅಂಶ ಬೆಳಕಿಗೆ ಬಂದಿದೆ.

ಮದುವೆಯಾದ 20 ವರ್ಷಗಳ ಬಳಿಕ ನನ್ನ ಮಡದಿ ನನಗೆ ಹೀಗೆ ಮಾಡಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ನನಗೆ ಶಾಕ್ ಆಗಿದ್ದು, ಏನು ಮಾಡಬೇಕೆಂದು ತೋಚುತ್ತಿಲ್ಲ. ಪ್ರತಿ ತಿಂಗಳೂ ಆಕೆಗೆ ದುಡ್ಡು ಕಳುಹಿಸುತ್ತಿದ್ದ ಕಾರಣ ನನ್ನ ಬ್ಯಾಂಕ್ ಖಾತೆಯಲ್ಲಿ ಕೇವಲ 60,000 ಭಾಟ್‌ ಮಾತ್ರವೇ ಇತ್ತು. ನನಗೆ ಸಿಗಬೇಕಾದ ನ್ಯಾಯ ಹಾಗೂ ದುಡ್ಡಿಗಾಗಿ ಹೋರಾಟ ಮಾಡಲು ನಿರ್ಧರಿಸಿದೆ ಎಂದು ನಾರಿನ್ ತಿಳಿಸಿದ್ದಾರೆ.

ಟಾಪ್ ನ್ಯೂಸ್