ತೆಂಗಿನ ಕಾಯಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ಲಾರಿಯಲ್ಲಿದ್ದವರಿಗೆ ಏನೇಗಿದೆ ಎಂದೂ ನೋಡದೆ ತೆಂಗಿನ ಕಾಯಿಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿಕೊಂಡು ಹೋದ ಜನ; ವಿಡಿಯೋ ವೈರಲ್..
ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತ ಇದೀಗ ದೇಶದಾದ್ಯಂತ ಭಾರೀ ಸುದ್ದಿಯಾಗಿದೆ.ತೆಂಗಿನ ಕಾಯಿ, ಎಳನೀರು ತುಂಬಿದ್ದ ಲಾರಿ ಪಲ್ಟಿಯಾಗಿದ್ದು, ಜನ ಗೋಣಿ ಚೀಲ ತಂದು ತೆಂಗಿನ ಕಾಯಿ ತುಂಬಿಸಿಕೊಂಡು ಹೋಗಿದ್ದು, ಡ್ರೈವರ್ ಗಳು, ಕ್ಲೀನರ್ ಗೆ ಏನು ಆಗಿದೆ ಎಂದೂ ವಿಚಾರಿಸಿಲ್ಲ ಎನ್ನಲಾಗಿದೆ.
ಆಂಧ್ರಪ್ರದೇಶದ ನಂದ್ಯಾಳ ಜಿಲ್ಲೆಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಎಳನೀರು, ತೆಂಗಿನ ಕಾಯಿ ತುಂಬಿದ್ದ ಲಾರಿ ಮಂಡಲ ಜಗದೂರ್ತಿಗೆ ಬಂದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಹೈದರಾಬಾದ್ ಕಡೆಯಿಂದ ತೆಂಗಿನಕಾಯಿ ತುಂಬಿಕೊಂಡು ಗುತ್ತಿ ಕಡೆಗೆ ಬರುತ್ತಿದ್ದ ಲಾರಿಯ ಮುಂಭಾಗದ ಟೈರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ.
ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ತೆಂಗಿನ ಕಾಯಿಗಳೆಲ್ಲ ರಸ್ತೆಯ ಇಕ್ಕೆಲಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ಒಂದು ತೆಂಗಿನಕಾಯಿಯೂ ಉಳಿಯದಂತೆ ದೋಚಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ನೋಡಿದಾಗ ಕೆಲವು ಬೆರಳೆಣಿಕೆಯ ತೆಂಗಿನ ಕಾಯಿಗಳು ಮಾತ್ರ ಅಲ್ಲಿಯೇ ಇದ್ದವು. ಕೊನೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಲಾರಿಯನ್ನು ತೆರವುಗೊಳಿಸಿದ್ದಾರೆ.
ಈ ಹಿಂದೆಯೂ ಕೋಳಿ, ಮೇಕೆ ಕಾಲು, ಮದ್ಯದ ಬಾಟಲಿ, ವ್ಯಾನ್, ಹಾಲು, ಪೆಟ್ರೋಲು, ಡೀಸೆಲು ಸಾಗಿಸುವ ಲಾರಿಗಳು ಅಪಘಾತಕ್ಕೀಡಾಗುವಾಗ ಇಂತಹದ್ದೇ ಪ್ರಸಂಗಗಳು ನಡೆದಿವೆ.
ಜನರು ಚಾಲಕನ ಸ್ಥಿತಿ ಏನಾಗಿದೆ? ಲಾರಿಯಲ್ಲಿ ಬೇರೆ ಯಾರಾದ್ರೂ ಇದ್ದರಾ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸ್ಥಳೀಯರು ಸಿಕ್ಕ ಸಿಕ್ಕ ತೆಂಗಿನಕಾಯಿಗಳನ್ನು ಎದೆಗವಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವರು ಚೀಲಗಳಲ್ಲಿ ತೆಂಗಿನಕಾಯಿಯನ್ನು ತುಂಬಿಕೊಂಡು ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ತೀವ್ರ ಸ್ವರೂಪ ಪಡೆದ ಚಂಡ ಮಾರುತ
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರತ
ಅತ್ಯಂತ ತೀವ್ರ ಸ್ವರೂಪ ತಾಳಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಭಾರತದ ಪಶ್ಚಿಮ ಕರಾವಳಿಯಲ್ಲಿ ಚಂಡಮಾರುತದ ಪ್ರಭಾವ ಉಂಟಾಗುವ ಭೀತಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ದೀಘಾದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) ಎಂಟು ತಂಡಗಳಲ್ಲಾಗಿ 200 ಸಿಬ್ಬಂದಿ ನಿಯೋಜಿಸಿದೆ. ಭಾನುವಾರದವರೆಗೆ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಭಾರಿ ಗಾಳಿ, ಮಳೆಯಾಗುವ ಸಾಧ್ಯತೆಯಿದೆ. ಮೋಚಾ ಚಂಡಮಾರುತ ಮೇ 14ರ ವೇಳೆಗೆ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ಗೆ ಅಪ್ಪಳಿಸುವ ಸಾಧ್ಯತೆಯಿದೆ.
ಈ ಹವಾಮಾನ ವೈಪರೀತ್ಯದಿಂದಾಗಿ ಶನಿವಾರದಂದು ತ್ರಿಪುರಾ ಮತ್ತು ಮಿಜೋರಾಂನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಭಾನುವಾರದಂದು ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂನಲ್ಲಿ ಮಳೆಯಾಗುವ ಸಾಧ್ಯತೆಯಿದೆ.