ಬೆಂಗಳೂರು:ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದ್ದು ಸರಕಾರ ರಚನೆಗೆ ಸ್ಪಷ್ಟ ಬಹುಮತ ಪಡೆದುಕೊಂಡಿದೆ.
ಬಿಜೆಪಿ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.ಈ ಬಾರಿ ಎಲ್ಲಾ ಪಕ್ಷದಲ್ಲೂ ಕೆಲವು ಘಟಾನುಘಟಿ ನಾಯಕರುಗಳಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಇದರಲ್ಲೂ ಸಿಎಂ ಬೊಮ್ಮಾಯಿ ಸಚಿವ ಸಂಪುಟದ ಅನೇಕ 11 ಮಂದಿ ಸಚಿವರು ಪರಜಯವಾಗಿದ್ದಾರೆ.
ಸೋತ ಪ್ರಮುಖ ರಾಜಕೀಯ ನಾಯಕರು
ಸಚಿವ ಶ್ರೀರಾಮುಲು,ಬಿಜೆಪಿ ರಾಷ್ಟ್ರೀಯ ನಾಯಕ ಸಿ.ಟಿ ರವಿ,ಸಚಿವ ಬಿಸಿ ಪಾಟೀಲ್,ಸಚಿವ ವಿ. ಸೋಮಣ್ಣ, ಸಚಿವ ಮುರುಗೇಶ್ ನಿರಾಣಿ, ಸಚಿವ ಕೆ. ಸುಧಾಕರ್
ಸಚಿವ ಆರ್. ಅಶೋಕ್, ಸಚಿವ ನಾರಾಯಣಗೌಡ, ಸಚಿವ
ಎಂಟಿಬಿ ನಾಗರಾಜ್, ಸಚಿವ ಗೋವಿಂದ ಕಾರಜೋಳ, ಸಚಿವ ಮಾಧುಸ್ವಾಮಿ ಸೋಲನ್ನು ಕಂಡಿದ್ದಾರೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್
ವೈ ಎಸ್ ವಿ ದತ್ತಾ, ಮಾಜಿ ಸ್ಪೀಕರ್ ರಮೇಶ್ ಕುಮಾರ್
ಶಾಸಕ ನಿಖಿಲ್ ಕುಮಾರಸ್ವಾಮಿ ಸೋಲನ್ನು ಕಂಡಿದ್ದಾರೆ.