ನಾಯಿಗೆ ಅನ್ನ, ಆಹಾರ ಕೊಡದೆ ಉಪವಾಸಕ್ಕೆ ಕೆಡವಿದ ವ್ಯಕ್ತಿಗೆ ಜೈಲು ಶಿಕ್ಷೆ

ಸಾಕು ನಾಯಿಯನ್ನು ಕಬ್ಬಿಣದ ಸರಪಳಿಯಲ್ಲಿ ಕಟ್ಟಿ ಹಾಕಿ, ಹಸಿವಿನಿಂದ ಬಳಲಿಸಿದ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಲಂಡನ್ 8 ವಾರಗಳ ಜೈಲು ಶಿಕ್ಷೆ ವಿಧಿಸಿದೆ.

ಕೋವೆಂಟ್ರಿಯ ಗುರ್ಮಿಂದರ್ ಶಿಕ್ಷೆಗೊಳಗಾದ ವ್ಯಕ್ತಿ.

ಪ್ರೆಸೊ ಕೆನಾರಿಯೊ ಎನ್ನುವ ಸ್ಪಾನಿಷ್ ತಳಿಯ ‘ಸಶಾ’ ಎನ್ನುವ ನಾಯಿ ಈಚೆಗಷ್ಟೇ ಏಳು ಮರಿಗಳಿಗೆ ಜನ್ಮ ನೀಡಿತ್ತು. ಮಾಲೀಕ ಗುರ್ಮಿಂದರ್ ನಾಯಿಗೆ ಮೈನಡುಗುವ ಚಳಿಯಲ್ಲಿ ಕಬ್ಬಿಣದ ಸರಪಳಿ ಬಿಗಿದು, ಹಸಿವಿನಿಂದ ಬಳಲುವಂತೆ ಮಾಡಿದ್ದ ಎಂದು ‘ದಿ ಕೋವೆಂಟ್ರಿ ಟೆಲಿಗ್ರಾಫ್’ ಪತ್ರಿಕೆ ವರದಿ ಮಾಡಿತ್ತು.

ನಾಯಿಯ ಬೆನ್ನೆಲುಬು, ಪಕ್ಕೆಲುಬು ಕಾಣುವಷ್ಟು ಸೊರಗಿದ್ದರಿಂದ ಅನ್ನ ಆಹಾರ ಹಾಕಿಲ್ಲ ಎಂದು ಅಂದಾಜಿಸಲಾಗಿತ್ತು. ಆರೋಗ್ಯವಂತ ನಾಯಿಯು ಸರಾಸರಿ 40 ಕೆಜಿಯಷ್ಟಿರುತ್ತದೆ. ಸಶಾ ಕೇವಲ 25.7ಕೆ.ಜಿಯಷ್ಟು ತೂಕ ಕಳೆದುಕೊಂಡಿತ್ತು.

ಈ ಗುರ್ಮಿಂದರ್ ನಿಗೆ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ತನ್ನ ಅಪರಾಧವನ್ನು ಒಪ್ಪಿಕೊಂಡ ನಂತರ ನ್ಯಾಯಾಧೀಶರು 8 ವಾರಗಳ ಶಿಕ್ಷೆ ನೀಡಿದ್ದಾರೆ.

ಟಾಪ್ ನ್ಯೂಸ್