ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳು

ನವದೆಹಲಿ;ಕೇಂದ್ರ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಬುಧವಾರ ಇಂದು ಅವಿಶ್ವಾಸ ನಿರ್ಣಯ ಮಂಡನೆ ಆಗಿದೆ.
2003ರ ನಂತರ ಇದೇ ಮೊದಲ ಬಾರಿಗೆ ಕೇಂದ್ರದ ಸರಕಾರವೊಂದರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗಿರುವುದು.

ಮೋದಿ ಸರ್ಕಾರದ ದುರಹಂಕಾರವನ್ನು ಮುರಿಯಲು ಮತ್ತು ಮಣಿಪುರದ ಬಗ್ಗೆ ಮಾತನಾಡುವಂತೆ ಮಾಡಲು ಕೊನೆಯ ಅಸ್ತ್ರವನ್ನಾಗಿ ಇದನ್ನು ಬಳಸುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸುತ್ತೇವೆ ಎಂದು ವಿಪಕ್ಷಗಳು ಹೇಳಿವೆ.

ಕಾಂಗ್ರೆಸ್ ಸಲ್ಲಿಸಿದ ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸನ್ನು ಸ್ಪೀಕರ್ ಸ್ವೀಕರಿಸಿದರು. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಈ ವಿಷಯವನ್ನು ಸದನದ ನಾಯಕರೊಂದಿಗೆ
ಚರ್ಚಿಸಿ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸುವುದಾಗಿ ಹೇಳಿದರು.

ಲೋಕಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಅವರು ಮಂಡಿಸಿದ ಈ ಪ್ರಸ್ತಾವನೆಯ ನೋಟೀಸನ್ನು ಮತಕ್ಕಾಗಿ ಸ್ವೀಕರಿಸಲಾಗಿದೆ.
ಟಾಪ್ ನ್ಯೂಸ್