ಅತ್ಯಾಚಾರದಿಂದ ರಕ್ಷಿಸಲು ಹೆಣ್ಣುಮಕ್ಕಳ ಸಮಾಧಿಯ ಮೇಲೆ ಬೀಗ ಹಾಕುತ್ತಿರುವ ಫೋಷಕರು?ಶಾಕಿಂಗ್ ವರದಿ..
ಇಸ್ಲಾಮಾಬಾದ್:ಪಾಕಿಸ್ತಾನದ್ದಲ್ಲಿ ಕೆಲವು ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗೆ ಬೀಗ ಹಾಕಿ ಅತ್ಯಾಚಾರಕ್ಕೆ ಒಳಗಾಗದಂತೆ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಸಮಸ್ಯೆಯನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೈಲೈಟ್ ಮಾಡಿದ್ದಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಪಾಕಿಸ್ತಾನದಲ್ಲಿ ನಡೆದ ಆಘಾತಕಾರಿ ಘಟನೆ ಹೊರಹೊಮ್ಮಿದೆ, ಅಲ್ಲಿ ಕೆಲವು ನಿವಾಸಿಗಳು ತಮ್ಮ ಹೆಣ್ಣುಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಅವರ ಸಮಾಧಿಗಳಿಗೆ ಬೀಗ ಹಾಕಲು ಮುಂದಾಗಿದ್ದಾರೆಂದು ವರದಿಯಾಗಿದೆ.
2013 ರಲ್ಲಿ ಗುಜ್ರಾನ್‌ವಾಲಾದ ಕಿಲಾ ದಿದರ್ ಸಿಂಗ್‌ನಲ್ಲಿರುವ ಸ್ಮಶಾನದ ಹೊರಗೆ ಬಾಲಕಿಯ ಶವ ಪತ್ತೆಯಾಗಿದೆ ಬಳಿಕ ಮೃತದೇಹದ ಮೇಲೆ ರೇಪ್ ನಡೆದಿರುವುದು ಬಯಲಾಗಿದೆ.
ಪಂಜಾಬ್‌ನ ಅಂದಿನ ಮುಖ್ಯಮಂತ್ರಿ ಶಹಬಾಜ್ ಷರೀಫ್ ಅವರು ಘಟನೆಯ ಬಗ್ಗೆ ತಕ್ಷಣದ ತನಿಖೆಗೆ ಆದೇಶಿಸಿದ್ದರು.
ಇತ್ತೀಚೆಗಷ್ಟೇ ಮುಹಮ್ಮದ್ ಮುನೀರ್ ಅವರ ಹದಿನೈದು ವರ್ಷದ ಮಗಳು ಜೈನಾಬ್ ಅವರ ಶವ ಸ್ಮಶಾನದ ಹೊರಗೆ ಪತ್ತೆಯಾಗಿರುವ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಆಕೆಯ ಅಂತ್ಯಸಂಸ್ಕಾರದ ಬಳಿಕ ಲೈಂಗಿಕ ದೌರ್ಜನ್ಯದ ಉದ್ದೇಶದಿಂದ ಶವವನ್ನು ಸಮಾಧಿಯಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಫೋಟೋ ಗಳಲ್ಲಿ ಸಮಾಧಿಯ ಮೇಲೆ ಕಬ್ಬಿಣದ ಗೇಟ್ ನಿರ್ಮಿಸಿ ಬೀಗ ಹಾಕಿರುವುದು ಕೂಡ ಕಂಡು ಬಂದಿದೆ.