ಮಂಗಳೂರು; ಲೋನ್ ಆ್ಯಪ್ ನಲ್ಲಿ ಸಾಲ ಪಡೆದ ಯುವತಿಗೆ ಬೆದರಿಕೆ; ಸಾಲ ಪಾವತಿ ಮಾಡಿದರೂ ಮತ್ತೆ ದುಷ್ಕರ್ಮಿಗಳು ಮಾಡಿದ್ದೇನು ಗೊತ್ತಾ?

ಮಂಗಳೂರು:ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಗೆ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಮೊದಲು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಕ್ವಿಕ್ ಮನಿ’ ಎಂಬ ಲೋನ್ ಆ್ಯಪ್ ಡೌನ್‌ಲೋಡ್ ಮಾಡಿ 10,000 ರೂ.ಸಾಲಕ್ಕೆ ಅರ್ಜಿ ಹಾಕಿದ್ದಳು. ತಕ್ಷಣ ಆಕೆಯ ಖಾತೆಗೆ 7,500 ರೂ.ಜಮೆಯಾಗಿತ್ತು.ಕೆಲವು ದಿನಗಳ ಬಳಿಕ ಸಾಲ ಮರುಪಾವತಿ ಮಾಡಿದ್ದಳು.

ಬಳಿಕ ಹಲವು ವಾಟ್ಸ್‌ಆ್ಯಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದರಲ್ಲದೆ ಆಕೆಯ ಖಾತೆಗೆ 14,000 ರೂ. ಜಮೆ ಮಾಡಿದ್ದರು.ಅದನ್ನು ಕೂಡ ತಾನು ಮರುಪಾವತಿ ಮಾಡಿದ್ದಳು.

ಇದಾದ ಬಳಿಕ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದರು ಮತ್ತು ಆಕೆಗೆ ನಗ್ನ ಫೋಟೋ ಎಡಿಟ್ ಮಾಡಿ ಹಂಚಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಇದೇ ರೀತಿ ಆಕೆಯಿಂದ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಸಂತ್ರಸ್ತ ಯುವತಿ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಟಾಪ್ ನ್ಯೂಸ್