ಅಪರೂಪದ ಘಟನೆಯೊಂದರಲ್ಲಿ ಬೆನ್ನಿನಲ್ಲಿ ಚಿಪ್ಪಿನೊಂದಿಗೆ
ಮಗು ಜನಿಸಿದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ಫ್ಲೋರಿಡಾದ ಕ್ಲಿಯರ್‌ವಾಟರ್‌ನ ಜೇಮ್ಸ್ ಮೆಕಲಮ್ ಎಂಬ ಮಗುವಿಗೆ ಹುಟ್ಟಿನಿಂದಲೆ ಬೆನ್ನಿನಲ್ಲಿ ಚಿಪ್ಪು ಕಾಣಿಸಿಕೊಂಡಿದೆ.ಮಗುವಿನ ದೇಹದಲ್ಲಿ ಚಿಪ್ಪನ್ನು ನೋಡಿ ಪೋಷಕರು ಆತನಿಗೆ ಲಿಟಲ್ ನಿಂಜಾ ಟರ್ಟಲ್ ಎಂದು ಹೆಸರಿಟ್ಟಿದ್ದಾರೆ.
ಜೇಮ್ಸ್‌ನ ಹೆತ್ತವರು ಆರಂಭದಲ್ಲಿ ಮಗುವಿನ ಬೆನ್ನಿನ ಮೇಲಿದ್ದ ಚಿಪ್ಪನ್ನು ಜನ್ಮ ಗುರುತು ಎಂದು ಭಾವಿಸಿದ್ದರು. ಆದರೆ ಮಗುವಿಗೆ ಎರಡು ವರ್ಷವಾಗುವಷ್ಟರಲ್ಲಿ ಇದು ಮತ್ತಷ್ಟು ಬೆಳೆಯಿತು.ದಪ್ಪವಾಗಿ ಗಡ್ಡೆಯ ರೂಪವನ್ನು ಪಡೆದುಕೊಂಡಿತು. ಬೆನ್ನಿನ ಮೇಲೆ ದಪ್ಪದಾದ ಚಿಪ್ಪು ಇದ್ದ ಕಾರಣ ಅವನನ್ನು ಮಲಗಿಸಲು ಸಹ ಸಾಧ್ಯವಾಗುತ್ತಿರಲ್ಲಿಲ್ಲ. ಕಷ್ಟಪಟ್ಟು ಒಂದು ಬದಿಯಲ್ಲಿ ಮಲಗಿಸುತ್ತಿದ್ದೆವು ಎಂದು ಲಿಟಲ್ ನಿಂಜಾ ಟರ್ಟಲ್ ಪೋಷಕರು (Parents) ತಿಳಿಸಿದ್ದಾರೆ.
ಚಿಪ್ಪು ಬೆಳವಣಿಗೆಯ ಹಂತದಲ್ಲಿ ತುರಿಕೆಗೆ ಸಹ ಕಾರಣವಾಗಿತ್ತು ಹೀಗಾಗಿ ಜೇಮ್ಸ್ ತನ್ನ ಬೆನ್ನನ್ನು ಪದೇ ಪದೇ ಕೆರೆದುಕೊಳ್ಳುತ್ತಿದ್ದನು.
ಮಗುವಿನ ಈ ಅಪರೂಪದ ಕಾಯಿಲೆಯನ್ನು ಗುಣಪಡಿಸಲು ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಮೊದಲನೆಯದು ಅವನು ಆರು ತಿಂಗಳ ಮಗುವಾಗಿದ್ದಾಗ ಮತ್ತು ಎರಡನೆಯದು 8 ತಿಂಗಳ ನಂತರ ನಡೆಯಿತು.
ಚಿಕಿತ್ಸೆಯ ನಂತರ ಜೇಮ್ಸ್‌ನ ಸ್ಥಿತಿ ಸಂಪೂರ್ಣವಾಗಿ ಸುಧಾರಣೆಯಾಗಿದೆ. ಸರ್ಜರಿಯ ನಂತರ ನಾವು ತುಂಬಾ ಸಂತೋಷಗೊಂಡಿದ್ದೇವೆ. ಜೇಮ್ಸ್ ಈಗ ಯಾವುದೇ ಅಡ್ಡಿಯಿಲ್ಲದೆ ಆರಾಮವಾಗಿ ಮಲಗಲು ಸಾಧ್ಯವಾಗುತ್ತಿದೆ ಎಂದು ಪೋಷಕರು ತಿಳಿಸಿದ್ದಾರೆ.