ಬ್ರಹ್ಮಾವರ; ಬೈಕಿನಿಂದ ಬಿದ್ದು ಮಹಿಳೆ ಮೃತ್ಯು

ಬ್ರಹ್ಮಾವರ:ಬೈಕಿನಿಂದ ಬಿದ್ದು ಮಹಿಳೆ ಮೃತಪಟ್ಟ ಘಟನೆ ಹೆಬ್ರಿ- ಬ್ರಹ್ಮಾವರ ರಸ್ತೆಯ ಕೊಳಂಬೆ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಕೋಟೇಶ್ವರ ನಿವಾಸಿ, ಲೈಬ್ರೆರಿಯನ್ ಶಾಂಭವಿ ಪಿ.(59) ಎಂದು ಗುರುತಿಸಲಾಗಿದೆ.

ಕಾಲೇಜು ಬಿಟ್ಟ ನಂತರ ಇವರು ಕಾಲೇಜಿನ ಲ್ಯಾಬ್ ಟೆಕ್ನಿಷಿಯನ್ ಸುಧೀಂದ್ರ ಎಂಬವರ ಬೈಕಿ ನಲ್ಲಿ ಬ್ರಹ್ಮಾವರದ ಬಸ್ ನಿಲ್ದಾಣದವರೆಗೆ ಹೊರಟಿದ್ದರು. ಕೊಳಂಬೆ ಬಳಿ ಬರುವಾಗ ಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದರೆನ್ನಲಾಗಿದೆ.

ಘನಟೆಯಲ್ಲಿ ಗಂಭೀರವಾಗಿ ಗಾಯಗೊಂಡ ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ‌.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್