ಕರಾವಳಿಯಲ್ಲಿ ಹೆಚ್ಚಿದ ಚಳಿ; ಸಾಂಕ್ರಾಮಿಕ ರೋಗದ ಭೀತಿ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ಕಳೆದ ಡಿಸಂಬರ್ ನಲ್ಲಿ ಕಾಣಿಸಿಕೊಂಡಿದ್ದ ಕಡಿಮೆ ಉಷ್ಣಾಂಶ ಇದೀಗ ಮತ್ತೆ ಕಂಡು ಬರುತ್ತಿದೆ.ಚಳಿಯಿಂದಾಗಿ ರಕ್ತಹೆಪ್ಪುಗಟ್ಟುವ ಜೊತೆಗೆ ಹೃದಯಾಘಾತಗಳು ದೇಶದ ಹಲವೆಡೆ ಹೆಚ್ಚಳವಾಗುತ್ತಿದೆ.

ಅತಿಯಾದ ಚಳಿಯುಂದ ಜ್ವರ, ಶೀತ- ಕೆಮ್ಮು, ಗಂಟಲು ನೋವು ಉಂಟಾಗಬಹುದು. ಅಲರ್ಜಿ, ಅಸ್ತಮಾ ರೋಗಿಗಳು ಎಚ್ಚರ ವಹಿಸಬೇಕಾದ ಆವಶ್ಯಕತೆ ಎದುರಾಗಿದೆ.

ಚಳಿಯಿಂದ ರಕ್ಷಣೆ ಹೇಗೆ?
ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕುಂದುವ ಅಪಾಯವಿರುತ್ತದೆ.ಆದ್ದರಿಂದ ಈ ಅವಧಿಯಲ್ಲಿ ನಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕಿದೆ.
ತಂಪು ಆಹಾರವನ್ನು ಸೇವಿಸಬಾರದು,ಹೊರಗಿನ ಆಹಾರ ಸೇವನೆ ಕಡಿಮೆ ಮಾಡಿ,ದೆಹವನ್ನು ಸ್ವಚ್ಛವಾಗಿಡಿ,ಕುದಿಸಿ ಆರಿಸಿದ ನೀರು, ಬಿಸಿ ಆಹಾರವನ್ನು ಸೇವಿಸಬೇಕು.‌ಸಂಧಿವಾತ ಇರುವವರು ದೇಹವನ್ನು ಬೆಚ್ಚಗಿ ಡಬೇಕು.

ಟಾಪ್ ನ್ಯೂಸ್