ಇಬ್ಬರು ಯುವತಿಯರ ನಡುವೆ ಹುಟ್ಟಿದ ಪ್ರೀತಿ; ಲಿಂಗಪರಿವರ್ತನೆ ಮಾಡಿ ಗಂಡಾದವಳಿಗೆ ಕೈಕೊಟ್ಟ ಪ್ರಿಯತಮೆ!

ಉತ್ತರಪ್ರದೇಶ;ಸಿನಿಮಾ ಕಥೆಗಿಂತ ಕಡಿಮೆಯಿಲ್ಲದ ಕಥೆ ಇದು, ಯುವತಿಯರಿಬ್ಬರ ನಡುವೆ ಪ್ರೀತಿ ಬೆಳೆದಿದ್ದು, ಒಬ್ಬಳನ್ನು ನಂಬಿ‌ ಮತ್ತೋರ್ವಳು ಲಿಂಗ ಪರಿವರ್ತನೆ ಮಾಡಿಕೊಂಡು ಮೋಸ ಹೋಗಿದ್ದಾಳೆ‌.

ಉತ್ತರ ಪ್ರದೇಶದ ಝಾನ್ಸಿಯ ಕುಟುಂಬವೊಂದು ಪೇಯಿಂಗ್ ಗೆಸ್ಟ್‌ಗೆ ತಮ್ಮ ಮನೆಗೆ ಅವಕಾಶ ನೀಡಿದಾಗ ಈ ಸ್ಟೋರಿ ಆರಂಭವಾಗಿದೆ.

ಸೋನಾಲ್ ಎಂಬಾಕೆ ತನ್ನ ಹೆತ್ತವರೊಂದಿಗೆ ಇರುತ್ತಿದ್ದಳು, ಆದರೆ ಸನಾ ಪೇಯಿಂಗ್ ಗೆಸ್ಟ್ ಆಗಿ ಬಂದಳು. ಅದೇ ಮನೆಯ ಮೇಲಿನ ಮಹಡಿಯಲ್ಲಿ ತಂಗಿದ್ದಳು.

ಮೊದಲು ಗೆಳತಿಯರಾದ ಸೋನಾಲ್ ಮತ್ತು ಸನಾ ನಾಲ್ಕು ತಿಂಗಳೊಳಗೆ ಪ್ರೇಮಿಗಳಾದರು. ಆದರೆ ಸೋನಾಲ್ ಕುಟುಂಬ ಇವರ ಪ್ರೀತಿಯನ್ನು ಒಪ್ಪಲಿಲ್ಲ. ಜೊತೆಗೆ ಸನಾ ಅವರಿಗೆ ಮನೆ ಬಿಟ್ಟು ಹೋಗುವಂತೆ ಹೇಳಿದ್ದರು.

ಸರ್ಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದ ಸನಾಗೆ ಒಂದು ವರ್ಷದ ನಂತರ ಸರ್ಕಾರಿ ಕ್ವಾಟ್ರಸ್ ಸಿಕ್ಕಿದೆ.ಇದರಿಂದ ಸೋನಾಲ್ ಅವರ ಮನೆಯಿಂದ ಹೊರಹೋಗಲು ನಿರ್ಧರಿಸಿದಳು.ಸನಾ ಬಾಡಿಗೆ ಮನೆಬಿಟ್ಟು ಹೋದ ನಾಲ್ಕು ದಿನಗಳ ನಂತರ, ಸೋನಾಲ್ ಕೂಡ ಸನಾ ಜೊತೆ ವಾಸಿಸಲು ನಿರ್ಧರಿಸಿದರು.

ಸಮಯ ಕಳೆದಂತೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೋನಾಲ್ ಸನಾಗೆ ಮನವರಿಕೆ ಮಾಡಿದರು. ಬಳಿಕ ಅವರು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ಭೇಟಿ ನೀಡಿದರು.

ಅಲ್ಲಿ ವೈದ್ಯರು ಸನಾಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರು. ಸನಾ ಶಸ್ತ್ರಚಿಕಿತ್ಸೆಗೆ ಫಿಟ್ ಎಂದು ಘೋಷಿಸಿದರು. ಜೂನ್ 22, 2020 ರಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ಬಳಿಕ ಸನಾ ಅವರು ಅಧಿಕೃತವಾಗಿ ತನ್ನ ಹೆಸರನ್ನು ಸೊಹೈಲ್ ಖಾನ್ ಎಂದು ಬದಲಾಯಿಸಿಕೊಂಡರು.

ತನ್ನ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಸೋನಾಲ್ ಎಲ್ಲಾ ವೈದ್ಯಕೀಯ ದಾಖಲೆಗಳಿಗೆ ಸೊಹೈಲ್ ಖಾನ್ ಅವರ ‘ಪತ್ನಿ’ ಎಂದು ಸಹಿ ಹಾಕಿದ್ದಾರೆ ಎಂದು ಸನಾ ಹೇಳಿಕೊಂಡಿದ್ದಾರೆ.
ಆದರೆ ಲಿಂಗ ಪರಿವರ್ತನೆ ಬಳಿಕ ಆಕೆ ಸನಾಗೆ ದೂರ ಮಾಡಿದ್ದು, ಪ್ರಕರಣ ಇದೀಗ ಠಾಣೆ ಮೆಟ್ಟಿಲೇರಿದೆ.

ಟಾಪ್ ನ್ಯೂಸ್