ಪ.ಬಂಗಾಳ; ಅಪಘಾತದ ಗಾಯಾಳುವೊಬ್ಬರಿಗೆ ಬರೊಬ್ಬರಿ 14 ಶಸ್ತ್ರಚಿಕಿತ್ಸೆ ನಡೆಸಿ ರಕ್ಷಣೆ ಮಾಡಲಾಗಿದೆ.
ಕಳೆದ ಜುಲೈನಲ್ಲಿ 35 ವರ್ಷದ ಬಸುದೇವ್ ಗೆ ಅಪಘಾತವಾಗಿತ್ತು. ಅವರ ಎಡಗಾಲಿಗೆ ತೀವ್ರ ಗಾಯಗಳಾಗಿ ಬರೋಬ್ಬರಿ 14 ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಆಶ್ಚರ್ಯ ಎಂಬಂತೆ ಸರ್ಜರಿಯಾಗಿ 6 ತಿಂಗಳ ಬಳಿಕ ಅವರು ನಡೆಯಲು ಆರಂಭಿಸಿದ್ದಾರೆ.
ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಸುದೇವ್ ಕಳೆದ ವರ್ಷ ಜುಲೈನಲ್ಲಿ ತಮ್ಮ ಪತ್ನಿಯೊಂದಿಗೆ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಪಿಸೋಲಿ ರಸ್ತೆಯಲ್ಲಿ ಅವರ ವಾಹನಕ್ಕೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಎಡಗಾಲಿಗೆ ತೀವ್ರವಾದ ಗಾಯಗಳಾಗಿದ್ದವು.
ಅವರ ಇಡೀ ಎಡ ಕಾಲಿಗೆ ರಕ್ತ ಪೂರೈಕೆ ಇರಲಿಲ್ಲ ಮತ್ತು ಕಾಲಿಗೆ ಗಂಭೀರವಾದ ಗಾಯಗಳಾಗಿತ್ತು.ವೈದ್ಯರು ಸೂಕ್ತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಕಾಲನ್ನು ಕತ್ತರಿಸದೆ ರಿಕವರಿ ಮಾಡಿದ್ದಾರೆ.