ಗಣರಾಜ್ಯೋತ್ಸವ ಪರೇಡ್ ನಲ್ಲಿ ನೌಕಾಪಡೆಯ ತಂಡವನ್ನು ಮುನ್ನಡೆಸಲಿರುವ ಮಂಗಳೂರಿನ ಕುವರಿ ಲೆಫ್ಟಿನೆಂಟ್ ಕಮಾಂಡರ್ ದಿಶಾ

ನವದೆಹಲಿ;ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ನೌಕಾಪಡೆಯ ತಂಡವನ್ನು ಮಂಗಳೂರಿನ ಕುವರಿ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ದಿಶಾ ಅಮೃತ್ ಅವರು ಮುನ್ನಡೆಸಲಿದ್ದಾರೆ.

ದಿಶಾ ಅವರು ಮಂಗಳೂರಿನ ತಿಲಕ್‌ ನಗರದ ಅಮೃತ್‌ ಕುಮಾರ್‌ ಮತ್ತು ಲೀಲಾ ಅಮೃತ್‌ ದಂಪತಿಯ ಪುತ್ರಿಯಾಗಿದ್ದಾರೆ.

29 ವರ್ಷದ ಲೆಫ್ಟಿನೆಂಟ್ ಕಮಾಂಡರ್ ದಿಶಾ ನೌಕಾಪಡೆಯ ಅಧಿಕಾರಿಯಾಗಿದ್ದು ಅಂಡಮಾನ ಮತ್ತು ನಿಕೋಬಾರ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ನಾರಿ ಶಕ್ತಿ ಸ್ತಬ್ದಚಿತ್ರದಲ್ಲಿ 144 ಮಂದಿ ನಾವಿಕರಿಲಿದ್ದು, ಇದರಲ್ಲಿ ಮೂವರು ಮಹಿಳಾ ಅಧಿಕಾರಿಗಳು ಮತ್ತು ಐವರು ಪುರುಷ ಅಗ್ನಿವೀರ್‌ಗಳು ಭಾಗವಹಿಸಲಿದ್ದಾರೆ.

ಟಾಪ್ ನ್ಯೂಸ್