ಕುಡಿದ ಮತ್ತಿನಲ್ಲಿ 100 ಅಡಿ ಎತ್ತರದ ತಾಳೆ ಮರವೇರಿ ಮಲಗಿದ ಭೂಪ; ಶಾಕಿಂಗ್ ಘಟನೆ ವರದಿ

ಕುಡಿದ ಮತ್ತಿನಲ್ಲಿ 100 ಅಡಿ ಎತ್ತರದ ತಾಳೆ ಮರವೇರಿ ಮಲಗಿದ ಭೂಪ; ಶಾಕಿಂಗ್ ಘಟನೆ ವರದಿ

ಕೊಯಮತ್ತೂರು:ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು 100 ಅಡಿ ಎತ್ತರದ ರಸ್ತೆ ಬದಿಯ ತಾಳೆ ಮರವೊಂದರ ಮೇಲೆ ಹತ್ತಿ ಮಲಗಿದ್ದ ಶಾಕಿಂಗ್ ಘಟನೆ ತಡರಾತ್ರಿ ಪೊಲ್ಲಾಚಿಯಿಂದ ವರದಿಯಾಗಿದೆ.

ಅನೈಮಲೈ ಸಮೀಪದ ಸೆಮ್ಮನಾಮಪತಿ ಗ್ರಾಮದ ಕೆ ಲಕ್ಷ್ಮಣನ್ (42) ಕೂಲಿ ಕಾರ್ಮಿಕನಾಗಿದ್ದ.

ಕೊಟ್ಟಂಪಟ್ಟಿ ಗ್ರಾಮದಲ್ಲಿ ಲಕ್ಷ್ಮಣನ್ ಭಾನುವಾರ ಸಂಜೆ ಕುಡಿದು ಮತ್ತೇರಿದ ಸ್ಥಿತಿಯಲ್ಲಿ ತಾಳೆ ಮರಕ್ಕೆ ಹತ್ತಿದ್ದಾನೆ. ಬಳಿಕ ಮರದ ಮೇಲೆಯೇ ನಿದ್ದೆಗೆ ಜಾರಿದ್ದಾರೆ.ಆತ ಮರದ ಎಲೆಗಳನ್ನು ಒಂದಕ್ಕೊಂದು ಹೆಣೆದು ಆರಾಮವಾಗಿ ಮಲಗಲು ಜಾಗವನ್ನು ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರದ ತುದಿಯಿಂದ ವಿಚಿತ್ರ ಶಬ್ದಗಳು ಬರುತ್ತಿರುವುದನ್ನು ಕೇಳಿದ ನಂತರ ಮರದ ಮೇಲೆ ವ್ಯಕ್ತಿಯೊಬ್ಬ ಮಲಗಿರುವುದನ್ನು ಜನರು ಕಂಡಿದ್ದಾರೆ.

ವ್ಯಕ್ತಿ ಕುಡಿದ ಅಮಲಿನಲ್ಲಿ ಬೊಬ್ಬೆ ಹೊಡೆಯುತ್ತಿದ್ದ. ಆತನನ್ನು ಕೆಳಗಿಳಿಸಲು ನಡೆಸಿದ ಯತ್ನ ವಿಫಲವಾದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಕೊಟ್ಟೂರು ಪೋಲೀಸ್ ತಂಡ ಧ್ವನಿವರ್ಧಕದ ಮೂಲಕ ಮಾತನಾಡಿ ಆತನನ್ನು ಮಾತನಾಡಿಸಿ ಕೆಳಗಿಳಿಸುವ ಪ್ರಯತ್ನ ಮಾಡಿದ್ದರು.ಆದರೆ ಅದು ವಿಫಲವಾಗಿತ್ತು.

ಹಗ್ಗಗಳನ್ನು ಬಳಸಿ ಆತನನ್ನು ಕೆಳಗಿಳಿಸಲು ಪ್ರಯತ್ನಿಸಲಾಗಿದೆ. ಸುರಕ್ಷತೆಗಾಗಿ ಕೆಳಗೆ ಬಲೆಯನ್ನೂ ಹಾಕಲಾಗಿತ್ತು. ಆದರೆ ವ್ಯಕ್ತಿಯ ದೈಹಿಕ ಸ್ಥಿತಿ ಮತ್ತು ಅಪಾಯಗಳನ್ನು ಪರಿಗಣಿಸಿ
ಬಳಿಕ ಕ್ರೇನ್ ಮೂಲಕ 100 ಅಡಿ ಎತ್ತರದ ಮರದ ಮೇಲಿದ್ದ ವ್ಯಕ್ತಿಯನ್ನು ಕೆಳಗಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com