ಕೇರಳ;ಭಾರೀ ಮಳೆ, ಭೂಕುಸಿತ, ಒಂದೇ ಕುಟುಂಬದ ‌ಐವರು ದುರ್ಮರಣ

ಕೇರಳ;ಒಂದೇ ಕುಟುಂಬದ ಐವರು ಭೂಕುಸಿತದಲ್ಲಿ ದುರಂತ ಸಾವು ಕಂಡ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಥೋಡುಪೊಜಾ ಬಳಿ ನಡೆದಿದೆ.

ಕಂಜಾರ್‌ ನಿವಾಸಿಗಳಾದ ಥಂಕಮ್ಮ(80),ಪುತ್ರ ಸೋಮನ್‌ (52)ಪತ್ನಿ ಶಾಜಿ(50),ಪುತ್ರಿ ಶಿಮಾ(30) ಮತ್ತು ದೇವಾನಂದ್‌(5)ಮೃತಪಟ್ಟ ದುರ್ದೈವಿಗಳು.

ಮುಂಜಾನೆ ಮೂರರ ಸುಮಾರಿಗೆ ಘಟನೆ ನಡೆದಿದೆ. ಮೃತದೇಹಗಳನ್ನು ಅವಶೇಷಗಳಡಿಯಿಂದ ತೆಗೆಯಲಾಗಿದೆ.

ಪರ್ವತ ಪ್ರದೇಶವಾದ ಇಡುಕ್ಕಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು,ಭಾರತೀಯ ಹವಾಮಾನ ಇಲಾಖೆ ಕಾಸರಗೋಡು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಕೊಟ್ಟಾಯಂ,ನೆಡುಕುನ್ನಮನ್‌,ಕರುಕಾಚಲ್‌ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು,ಅಗ್ನಿ ಶಾಮಕದಳ ಅನಾಹುತ ಪ್ರದೇಶಗಳಿಗೆ ದೌಡಾಯಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು