-ಮುಹಮ್ಮದ್ ಹನೀಫ್(35) ಮೃತಪಟ್ಟವರು.ಬಂಟ್ವಾಳದ ನಿವಾಸಿ ಮುಹಮ್ಮದ್ ಖಾಸಿಂಗೆ ಗಾಯ..
ಮಂಗಳೂರು:ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಲೇಡಿಹಿಲ್ ಬಳಿ ನಿನ್ನೆ ಸಂಜೆ ನಡೆದಿದೆ.
ಮುಹಮ್ಮದ್ ಹನೀಫ್(35) ಮೃತಪಟ್ಟವರು.ಬಂಟ್ವಾಳದ ನಿವಾಸಿ ಮುಹಮ್ಮದ್ ಖಾಸಿಂ ಗಾಯಗೊಂಡಿದ್ದಾರೆ.
ಈ ಇಬ್ಬರು ಉರ್ವಸ್ಟೋರ್‌ನಿಂದ ಲೇಡಿಹಿಲ್ ಕಡೆಗೆ ಬರುತ್ತಿದ್ದಾಗ ಲೇಡಿಹಿಲ್ ವೃತ್ತದ ಬಳಿ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಡಿವೈಡರ್‌ಗೆ ಬಡಿಯಿತಲ್ಲದೆ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.ಘಟನೆಯಲ್ಲಿ ಹನೀಫ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದರಿಂದ ಗಂಭೀರ ಗಾಯಗೊಂಡ ಮುಹಮ್ಮದ್ ಹನೀಫ್ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.