ಆಮ್ಲೆಟ್ ತಿಂದು, ಜ್ಯೂಸ್‌ ಕುಡಿದು ಅಂಗಡಿಯವನಿಗೆ ಹಣ ಕೊಡದೆ ಗದರಿಸಿ ಹೋದ ಮಹಿಳಾ ಪಿಎಸ್ ಐ; ದೂರು ದಾಖಲು

ಆಮ್ಲೆಟ್ ತಿಂದು, ಜ್ಯೂಸ್‌ ಕುಡಿದು ಅಂಗಡಿಯವನಿಗೆ ಹಣ ಕೊಡದೆ ಗದರಿಸಿ ಹೋದ ಮಹಿಳಾ PSI; ದೂರು ದಾಖಲು

ತಮಿಳುನಾಡು;ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಬ್ರೆಡ್ ಆಮ್ಲೆಟ್ ತಿಂದು ಮತ್ತು ಜ್ಯೂಸ್‌ ಕುಡಿದು ಅಂಗಡಿಯವನಿಗೆ ಹಣ ನೀಡಲು ನಿರಾಕರಿಸಿದ್ದಕ್ಕಾಗಿ ಒಬ್ಬ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಮತ್ತು ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.

ಗುಡುವಂಚೇರಿಯ ಎಲ್ಲಾ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಅಮಾನತುಗೊಂಡವರು.

ಮಹಿಳಾ ಠಾಣೆಯ ಸಬ್​ ಇನ್​ಸ್ಪೆಕ್ಟರ್ ಹಾಗೂ ಮೂವರು ಕಾನ್​ಸ್ಟೆಬಲ್​ಗಳು ಅಂಗಡಿಯೊಂದಕ್ಕೆ ಬಂದು, ಬ್ರೆಡ್​ ಆಮ್ಲೆಟ್​ ತಿಂದು, ಜ್ಯೂಸ್ ಕುಡಿದು, ನೀರಿನ ಬಾಟಲಿ ಖರೀದಿಸಿದ್ದರು, ಹಣ ಕೇಳಿದ್ದಕ್ಕೆ ಕೊಡುವುದಿಲ್ಲ, ಹೆಚ್ಚು ಮಾತಾಡಿದ್ರೆ ಲೈಸೆನ್ಸ್​ ಕ್ಯಾನ್ಸಲ್​ ಮಾಡಿಸ್ತೀನಿ ಎಂದು ಧಮ್ಕಿ ಹಾಕಿದ್ದರು ಎನ್ನಲಾಗಿದೆ.

ಅಂಗಡಿ ಮಾಲೀಕ ಮಣಿಮಂಗಲಂ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಲಾಗಿದೆ.

ಇದೇ ವೇಳೆ ತಾಂಬರಂ ಕಮಿಷನರ್ ಅಮಲರಾಜ್ ಸಬ್ ಇನ್ಸ್ ಪೆಕ್ಟರ್ ವಿಜಯಲಕ್ಷ್ಮಿ ಮತ್ತು ಇತರ ಮೂವರು ಕಾನ್ ಸ್ಟೇಬಲ್ ಗಳನ್ನು ಅಮಾನತುಗೊಳಿಸಿದ್ದಾರೆ.ಈ ಕುರಿತು ತನಿಖೆ ಇನ್ನೂ ನಡೆಯುತ್ತಿದೆ.

ಟಾಪ್ ನ್ಯೂಸ್