ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ತಿರುವನಂತಪುರಂ:ಲೇಡಿಸ್‌ ಹಾಸ್ಟೆಲ್‌ ಬಳಿ ಆಟೋದಲ್ಲಿ ಬಂದು ಖಾಸಗಿ ಅಂಗ ಪ್ರದರ್ಶನ ಮಾಡಿ ಅಸಭ್ಯವಾಗಿ ವರ್ತಿಸಿದ ಆಟೋ ಚಾಲಕನನ್ನು ಅರೆಸ್ಟ್ ಮಾಡಲಾಗಿದೆ.

ಮೂನ್ನ ಮೂಡು ವಟಿಯೂರ್ಕಾವಿನ ವಯಲಿಕಾಡದ ಚಂದ್ರಿಕಾ ಭವನದ ನಿವಾಸಿ ರಾತ್ರಿ 11ರ ಸುಮಾರಿಗೆ ಕಾಟನ್‌ ಹಿಲ್‌ ಸ್ಕೂಲ್‌ ಬಳಿಯಿರುವ ಲೇಡಿಸ್‌ ಹಾಸ್ಟೆಲ್‌ ಮುಂದೆ ಆಟೋ ನಿಲ್ಲಿಸಿ ಚಾಲಕ ಖಾಸಗಿ ಅಂಗ ಪ್ರದರ್ಶನ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ.

ಇದನ್ನು ಮಹಡಿಯಲ್ಲಿ ಓದುತ್ತಿದ್ದ ಮಕ್ಕಳು ಗಮನಿಸಿದ್ದು ಕೂಡಲೇ ಮಕ್ಕಳು ಆಟೋ ರಿಕ್ಷಾದ ನಂಬರ್‌ ಪಡೆದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಳಿಕ ವಿದ್ಯಾರ್ಥಿನಿಯರ ದೂರಿನ ಮೆರೆಗೆ ಮುತ್ತುರಾಜ್‌ ಎಂಬ ಆಟೋ ಚಾಲಕನಿಗೆ ಬಂಧಿಸಲಾಗಿದೆ. ಆರೋಪಿ ಈ ಮೊದಲು ಕೂಡ ಇದೇ ರೀತಿ ಮಾಡಿದ್ದಾನಾ ಎಂಬ ಬಗ್ಗೆ ಕೂಡ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್