ಕುಂದಾಪುರ; ಚೂರಿ ಇರಿತಕ್ಕೊಳಗಾಗಿದ್ದ ವ್ಯಕ್ತಿ ಸಾವು

ಕುಂದಾಪುರ; ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರೆಗಾರ್(42) ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ರಾಘು ಅಲಿಯಾಸ್ ರಾಘವೇಂದ್ರ ಶೇರೆಗಾರ್ ಅವರ ಮೇಲೆ
ಭಾನುವಾರ ಸಂಜೆ ಸುಮಾರು 7 ಗಂಟೆಗೆ ನ್ಯೂ ಡೆಲ್ಲಿ ಬಜಾರ್ ಅಂಗಡಿಯೆದುರು ವ್ಯಾಗನರ್ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಚೂರಿಯಲ್ಲಿ ಇರಿದು ಪರಾರಿಯಾಗಿದ್ದ.

ಗಂಭೀರಗೊಂಡಿದ್ದ ರಾಘುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಆರೋಪಿಯನ್ನು ತೀರ್ಥಹಳ್ಳಿ ಮೂಲದ ಶಾಫಿ ಎಂದು ಗುರುತಿಸಲಾಗಿದ್ದು, ಕೆಲವು ದಿನಗಳಿಂದ ಕುಂದಾಪುರದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೊಲೆಯಾದ ರಾಘವೇಂದ್ರ ಹಾಗೂ ಆರೋಪಿ ಶಾಫಿ ನಡುವಿನ ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್