BIG NEWS ಕುಂದಾಪುರ; ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ

ಕುಂದಾಪುರ;ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ

ಕುಂದಾಪುರ;ಪತ್ನಿಯನ್ನು ಕೊಲೆಗೈದು ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ದೇವಲ್ಕುಂದ ಶಾಲೆ ಬಳಿ ನಡೆದಿದೆ.

ಪೂರ್ಣಿಮಾ ಆಚಾರ್ಯ(38)ಕೊಲೆಯಾದ ಮಹಿಳೆ.ರವಿ ಆಚಾರ್ಯ(42)ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವವರು.

ಪೂರ್ಣಿಮಾ ಮತ್ತು ರವಿ ಮಧ್ಯೆ 15 ವರ್ಷಗಳ‌ ಹಿಂದೆ ವಿವಾಹವಾಗಿತ್ತು.ದಂಪತಿಗೆ ಎರಡು ಮಕ್ಕಳಿತ್ತು.ಮೊದಲು ಜೊತೆಗಿದ್ದ ದಂಪತಿ ಬಳಿಕ ವಿಪರೀತ ಕುಡಿತದ ಚಟ, ಗಂಡನ ಕಿರುಕುಳದಿಂದ ಬೇರೆ ಬೇರೆಯಾಗಿದ್ದರು. ಪೂರ್ಣಿಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ತಾಯಿಯ ಮನೆ ಸೊರಬದಲ್ಲಿ ನೆಲೆಸಿದ್ದರು.

ನಿನ್ನೆ ಪೂರ್ಣಿಮಾಳನ್ನು ರವಿ ಮನೆಗೆ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದ.ಅದರಂತೆ ಪೂರ್ಣಿಮಾ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ತೆರಳಿದ್ದರು.ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು,ಪತ್ನಿಯನ್ನು ಕೊಂದು ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಾಪ್ ನ್ಯೂಸ್