ಪುತ್ತೂರು;ಮಗನ ಮದರಂಗಿ ದಿನ ಅಪ್ಪ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಪುತ್ತೂರು ಕುಂಬ್ರದಲ್ಲಿ ನಡೆದಿದೆ.
ಕುಂಬ್ರದ ಒಳಮೊಗ್ರು ನಿವಾಸಿ ಉಮ್ಮರ್ ನಾಪತ್ತೆಯಾಗಿದ್ದಾರೆ.ಇವರ ಮಗನಿಗೆ ಇಂದು ಮದರಂಗಿ ಇತ್ತು.ನಾಳೆ ಮದುವೆ ಕಾರ್ಯಕ್ರಮ ಇತ್ತು.
ಮನೆಯ ಯಜಮಾನನ ನಾಪತ್ತೆಯಿಂದ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.ನಿನ್ನೆ ಮಧ್ಯಾಹ್ನದವರೆಗೆ ಅವರು ಪುತ್ತೂರಿನಲ್ಲಿದ್ದರು.
ಬಳಿಕ ಅವರ ಮೊಬೈಲ್ ಸ್ವಿಚ್ಢ್ ಆಫ್ ಆಗಿದೆ. ಕುಟುಂಬದ ಸಂಪರ್ಕಕ್ಕೆ ಸಿಗದ ಕಾರಣ ಮದರಂಗಿ ಕಾರ್ಯಕ್ರಮ ರದ್ದಾಗಿದೆ.