10ರೂ.ಗಳ ನೋಟು ಎಸೆದು ಕಡಿಮೆ ಖರ್ಚಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದ!; ಕೆ.ಆರ್ ಮಾರುಕಟ್ಟೆಯಲ್ಲಿ ನೋಟಿನ ರಾಶಿ ಎಸೆದ ಯುವಕನ ಉದ್ದೇಶ ಏನಾಗಿತ್ತು ಗೊತ್ತಾ?

ಬೆಂಗಳೂರು;ಕೆ ಆರ್ ಮಾರುಕಟ್ಟೆಯ ಮೇಲ್ಸೇತುವೆಯಿಂದ ಅರುಣ್‌ ಎಂಬಾತ ನಿನ್ನೆ 10 ರೂ.ಮುಖಬೆಲೆಯ ನೋಟುಗಳನ್ನು ಎಸೆದಿರುವುದು ಭಾರೀ ಸುದ್ದಿಯಾಗಿದೆ.

ಆತನ ಮೇಲೆ ಕೇಸ್ ದಾಖಲಿಸಿ ಪೊಲೀಸರು ಬಂಧಿಸಿದ್ದರು.ಇದೀಗ ಆತ ನೋಟು ಎಸೆದಿರುವುದರ ಹಿಂದಿನ‌ ಕಾರಣ ಬಯಲಾಗಿದೆ.

ಇವೆಂಟ್ ಮ್ಯಾನೇಜರ್, ಆಂಕರ್ ಆಗಿದ್ದ ಅರುಣ್ ಪ್ರಚಾರಕ್ಕಾಗಿ ಹಣ ಎಸೆದಿರೋದಾಗಿ ಹೇಳಿದ್ದಾನೆ.

ಹಣದ ನಿರ್ವಹಣೆ ಹಾಗೂ ಉದ್ಯಮದ ಬಗ್ಗೆ ವಿಡಿಯೋ ಮಾಡಿ, ಫೇಸ್‌ಬುಕ್‌, ಇನ್‌ಸ್ಟಾ ಹಾಗೂ ಯುಟ್ಯೂಬ್‌ನಲ್ಲಿ ಹಾಕುತ್ತೇನೆ.ಆದರೆ ನನಗೆ ಹೆಚ್ಚು ಪ್ರಚಾರ ಸಿಗ್ತಿರಲಿಲ್ಲ. ಜನರು ನನಗಾಗಿ ಟೈಮ್‌ ಕೊಡ್ತಿರಲಿಲ್ಲ. ಹಾಗಾಗಿ ಹೆಚ್ಚು ಪ್ರಚಾರ ಸಿಗಲು 10ರೂ.ನೋಟನ್ನು ಎಸೆದಿದ್ದಾನೆ ಎಂದು ಹೇಳಿರುವುದು ತಿಳಿದು ಬಂದಿದೆ.

ಅರುಣ್‌ ನೋಟನ್ನು ಎಸೆದಿದ್ದಾನೆ. ಮಾದ್ಯಮ ಅದನ್ನೇ ದೊಡ್ಡ ಸುದ್ದಿ ಮಾಡಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com