ಫ್ಲೈಓವರ್ ಮೇಲಿಂದ ಹಣದ ರಾಶಿಯನ್ನು ಎಸೆದ ಯುವಕ;ನೋಟು ಸಂಗ್ರಹಿಸಲು ಮುಗಿಬಿದ್ದ ಜನ, ವಿಡಿಯೋ ವೈರಲ್

ಬೆಂಗಳೂರು;ವ್ಯಕ್ತಿಯೋರ್ವ ಫ್ಲೈಓವರ್ ಮೇಲಿಂದ 10 ರೂ.ಮುಖಬೆಲೆಯ ನೋಟುಗಳ ರಾಶಿಯನ್ನು ಎಸೆದಿದ್ದು ನೋಟು ಹೆಕ್ಕಲು ಜನ ಮುಗಿಬಿದ್ದಿರುವ ಘಟನೆ ನಡೆದಿದೆ.

ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲಿಂದ 10 ರೂ. ಮುಖಬೆಲೆಯ ನೋಟುಗಳನ್ನು ಶೂಟ್ ಧರಿಸಿ, ಕೊರಳಿಗೆ ಗಡಿಯಾರ ನೇತು ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿ ಎಸೆದಿದ್ದಾನೆ ಎನ್ನಲಾಗಿದೆ.

ಫ್ಲೈಓವರ್ ಮೇಲಿಂದ ಹಣ ಬೀಳುತ್ತಿದ್ದಂತೆ ಅಲ್ಲಿದ್ದವರು ಅದನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ.

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com