ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆದುಕೊಂಡು ಬಂದು ರಾಸಲೀಲೆಯಲ್ಲಿ ತೊಡಗಿದ್ದ ASI

ವಿಶಾಖಪಟ್ಟಣ;ರಾತ್ರಿ ಶಿಫ್ಟ್ ನಲ್ಲಿ ಹೆಚ್ಚುವರಿ ಜವಾಬ್ಧಾರಿ ಕೊಟ್ಟು ಡ್ಯುಟಿಗೆ ನೇಮಿಸಿದ್ರೆ,ಇದೇ ಅಧಿಕಾರಿ ದುರ್ಬಳಕೆ ಮಾಡಿಕೊಂಡು ಎಎಸ್ ಐ ಮಹಿಳೆಯ ಜೊತೆ ಠಾಣೆಗೆ ಬಂದು ರಾಸಲೀಲೆಯಲ್ಲಿ ತೊಡಗಿದ್ದ ಘಟನೆ ಕೊಥಕೋಟ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ರವಿಕಾಮಥಮ್ ಪೊಲೀಸ್ ಠಾಣೆಯ ಎಎಸ್‌ಐ ಅಪ್ಪಾ ರಾವ್ ಅವರನ್ನು ಅದೇ ಜಿಲ್ಲೆಯ ಕೊಥಕೊಟ ಪೊಲೀಸ್ ಠಾಣೆಯ ಸಿಬ್ಬಂದಿ ಕೊರತೆಯಿಂದ ಕೆಲ ದಿನಗಳ ಕಾಲ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.ಅದರಲ್ಲೂ ಪ್ರಮುಖವಾಗಿ ರಾತ್ರಿ ಪಾಳಿಯ ಜವಾಬ್ದಾರಿ ನೀಡಲಾಗಿತ್ತು. ಈ ಪೊಲೀಸ್ ಠಾಣೆ ಪಟ್ಟಣದಿಂದ ಹೊರವಲಯದಲ್ಲಿರುವ ಎಎಸ್‌ಐ ಅಪ್ಪಾ ರಾವ್‌ಗೆ ಸಿಕ್ಕಿದ್ದೇ ಚಾನ್ಸ್ ಎಂಬಂತಾಗಿದೆ.

ಕಂಠಪೂರ್ತಿ ಕುಡಿದು ಕರ್ತವ್ಯಕ್ಕೆ ಹಾಜರಾದ ಅಪ್ಪಾ ರಾವ್, ರಾತ್ರಿ 10.30 ಸುಮಾರಿಗೆ ಮಹಿಳೆಯೊಬ್ಬರನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸ್ ಪೇದೆ, ಈ ರೀತಿಯ ವರ್ತನೆ ಸರಿಯಲ್ಲ. ತಕ್ಷಣವೇ ಮಹಿಳೆಯನ್ನು ಸುರಕ್ಷಿತವಾಗಿ ಬಿಡುವಂತೆ ತಾಕೀಕು ಮಾಡಿದ್ದಾರೆ. ಇದರಿಂದ ಕೆರಳಿದ ಎಎಸ್ ಐ ನಿನ್ನ ಆದೇಶ ಪಾಲಿಸುವುದು ನನ್ನ ಕೆಲಸವಲ್ಲ ಎಂದು ಗದರಿಸಿದ್ದಾನೆ.

ಇತ್ತ ಪೊಲೀಸ್ ಪೇದೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.ಇದರಿಂದ ಇನ್ಸ್ ಪೆಕ್ಟರ್ ಇಲ್ಯಾಸ್ ತಕ್ಷಣ ನೇರವಾಗಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.
ಈ ವೇಳೆ ಅಪ್ಪಾ ರಾವ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.ತಕ್ಷಣವೇ ಅಪ್ಪಾ ರಾವ್ ಅವರನ್ನು ಅಮಾನತುಗೊಳಿಸಾಗಿದೆ.ಸ್ಥಳಕ್ಕೆ ಇದೇ ವೇಳೆ ಮಾದ್ಯಮಗಳು ಬಂದಿದ್ದು ಸುದ್ದಿ ಭಾರೀ ವೈರಲ್‌ ಆಗಿದೆ.

ಅಪ್ಪಾರಾವ್ ಕಂಠಪೂರ್ತಿ ಕುಡಿದು ಮಹಿಳೆಯರ ಜೊತೆ ಸರಸ ಸಲ್ಲಾಪ ನಡೆಸುತ್ತಿದ್ದ.ಆದರೆ ದಿಢೀರ್ ಆಗಿ ಹಿರಿಯ ಅಧಿಕಾರಿ ಪೊಲೀಸ್ ಠಾಣೆಗೆ ಎಂಟ್ರಿಕೊಟ್ಟಿದ್ದಾರೆ.ಇದರಿಂದ ಆತ ಸಿಕ್ಕಿ ಹಾಕಿಕೊಂಡಿದ್ದಾನೆ.ಈ‌ ಕುರಿತು ಎಸ್ಪಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು