ಕೊಣಾಜೆ;ಮಗಳ ಮದುವೆಯ ದಿನದಂದೇ ತಂದೆ ಹೃದಯಾಘಾತದಿಂದ ನಿಧನರಾದ ಹೃದಯವಿದ್ರಾಹಕ ಘಟನೆ ಬೋಳಿಯಾರ್ ಕುಚುಗುಡ್ಡೆಯಲ್ಲಿ ನಡೆದಿದೆ.
ಬೋಳಿಯಾರ್ ಕುಚುಗುಡ್ಡೆಯ ಹಸನಬ್ಬ (60) ಮೃತರು ಎಂದು ಗುರುತಿಸಲಾಗಿದೆ.
ಹಸನಬ್ಬ ಬೀಡಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮಗಳಿಗೆ ಕಾಸರಗೋಡಿನ ಯುವಕನೊಂದಿಗೆ ಇಂದು ಹೊಸಂಗಡಿಯ ಗ್ರಾಂಡ್ ಅಡಿಟೋರಿಯಂ ನಲ್ಲಿ ಮದುವೆ ನಿಗದಿಯಾಗಿತ್ತು.
ಆದರೆ ಇಂದು ಮುಂಜಾನೆ 4 ಗಂಟೆಯ ವೇಳೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು.ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಈ ವೇಳೆ ಅವರು ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹಸನಬ್ಬ ಅವರು ಇಬ್ಬರು ಪುತ್ರರು, ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.
ಇನ್ನು ವಧುವಿನ ತಂದೆ ನಿಧನರಾದ ಕಾರಣ ಅಡಿಟೋರಿಯಂ ನಲ್ಲಿ ನಡೆಯಬೇಕಿದ್ದ ಮದುವೆ ರದ್ದುಗೊಳಿಸಿ ಎರಡು ಕುಟುಂಬದ ಹಿರಿಯರೊಂದಿಗೆ ಚರ್ಚಿಸಿ ಸಂಜೆಯ ವೇಳೆಗೆ ವರನ ಮನೆಯಲ್ಲಿ ನಿಖಾಹ್ ಕಾರ್ಯ ನಡೆದಿದೆ.