ಯುವ ಜೋಡಿಯ ಮೃತದೇಹ ಮಲಗಿದ ಸ್ಥಿತಿಯಲ್ಲೇ ಪತ್ತೆ; ಅನುಮಾನ ಹುಟ್ಟು ಹಾಕಿದ ಪ್ರಕರಣ

ಕೋಲಾರ;ಮಲಗಿದ ಸ್ಥಿತಿಯಲ್ಲೆ ಯುವ ಜೋಡಿಯ ಮೃತದೇಹ ಪತ್ತೆಯಾದ ಘಟನೆ ಕುಕನೂರು ತಾಲೂಕಿನ ಬಳಗೇರಿ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.

ಚಾಪೆ ಮೇಲೆ ಮಲಗಿದ ಸ್ಥಿತಿಯಲ್ಲೇ ರಕ್ತದ ಮಡುವಿನಲ್ಲಿ
ಬಳಿಗೇರಿ ಗ್ರಾಮದ ಸುಮಾ ಮತ್ತು ಪ್ರಕಾಶ ಭಜಂತ್ರಿ ಮೃತದೇಹ ಪತ್ತಯಾಗಿದೆ.

ಪ್ರೀತಿ ಮಾಡುವಂತೆ ಸುಮಾಗೆ ಪ್ರಕಾಶ ಭಜಂತ್ರಿ ಆಗ್ರಹಿಸಿದ್ದ.
ಆದರೆ ಆಕೆಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.ಮನೆಯಲ್ಲಿ ಒಪ್ಪದ ಹಿನ್ನೆಲೆ ಸುಮಾ ಪ್ರೀತಿಯನ್ನು ನಿರಾಕರಿಸಿದ್ದಳು. ಇದಕ್ಕೆ ಕೋಪಗೊಂಡ ಪ್ರಕಾಶ ಇಂದು ಮಧ್ಯಾಹ್ನ ಯಾರೂ ಇಲ್ಲದ ವೇಳೆ ಸುಮಾಳ ಮನೆಗೆ ಆಗಮಿಸಿ, ಆಕೆಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಕೊಲೆಯೋ, ಆತ್ಮಹತ್ಯೆಯೋ ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ಟಾಪ್ ನ್ಯೂಸ್