ವಿಶ್ವದ ಅತ್ಯಂತ ಹಿರಿಯ‌ ಮಹಿಳೆ 129ನೇ ವಯಸ್ಸಿನಲ್ಲಿ ನಿಧನ

ವಿಶ್ವದ ಅತ್ಯಂತ ಹಿರಿಯ ಮಹಿಳೆ ಕೊಕು ಇಸ್ತಾಂಬುಲೋವಾ ತಮ್ಮ 129ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ರಷ್ಯಾದ ಚೆಚೆನ್ಯಾ ಗ್ರಾಮದ ನಿವಾಸಿಯಾಗಿರುವ ಅವರು ಮನೆಯಲ್ಲಿಯೇ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಕೊಕು ಇಸ್ತಾಂಬುಲೋವಾ ಮೊಮ್ಮಗ ಇಲ್ಯಾಸ್​ ಅಬುಬರಕೋವ್​ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಅಜ್ಜಿ ನಿಧನದ ದಿನವೂ ಚೆನ್ನಾಗಿಯೇ ಇದ್ದರು ಎಂದು ಹೇಳಿದ್ದಾರೆ. ಅಜ್ಜಿ ನಮ್ಮ ಜೊತೆ ತಮಾಷೆ ಮಾಡಿಕೊಂಡು ಮಾತನಾಡುತ್ತಿದ್ದರು.ಇದ್ದಕ್ಕಿದ್ದಂತೆಯೇ ಅಸ್ವಸ್ಥರಾದರು. ಕೂಡಲೇ ನಾವು ವೈದ್ಯರನ್ನು ಕರೆಸಿದ್ದೆವು.ಆಗ ಅಜ್ಜಿಗೆ ರಕ್ತದೊತ್ತಡ ಕಡಿಮೆಯಾಗಿದೆ ಎಂಬ ವಿಚಾರ ನಮಗೆ ತಿಳಿಯಿತು.ಅವರನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಕೊಕು ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮ ಬ್ರಾಟ್ಸ್ಕೊಯ್​ನಲ್ಲಿ ನೆರವೇರಿಸಲಾಗಿದೆ. ಕೊಕು ತಮ್ಮ ಐವರು ಮೊಮ್ಮಕ್ಕಳು ಹಾಗೂ 16 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಕೊಕು ಇಸ್ತಾಂಬುಲೋವಾ ಸೋವಿಯತ್​ ಒಕ್ಕೂಟಕ್ಕೆ ಹಿರಿಯವರು. ಇವರು ಮುಸ್ಲಿಂ ಧರ್ಮದ ಅನುಯಾಯಿಯಾಗಿದ್ದರು.

ಟಾಪ್ ನ್ಯೂಸ್