23 ವರ್ಷದ ಯುವಕನ ಶಿರಚ್ಛೇದ;ಭೀಕರ ಕೃತ್ಯಕ್ಕೆ ರೊಚ್ಚಿಗದ್ದ ಜನ, ಪ್ರತಿಭಟನೆ

23 ವರ್ಷದ ಯುವಕನ ಶಿರಚ್ಛೇಧ ಮಾಡಿ ತಲೆಯನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆದಾಡಿದ ದುಷ್ಕರ್ಮಿ, ಭೀಕರ ಕೃತ್ಯಕ್ಕೆ ರೊಚ್ಚಿಗದ್ದ ಜನ, ಪ್ರತಿಭಟನೆ

ರಾಜಸ್ಥಾನ; ಜಲೋರ್ ಜಿಲ್ಲೆಯ ಪದರ್ಡಿ ಗ್ರಾಮದಲ್ಲಿ 23 ವರ್ಷದ ಯುವಕನನ್ನು ಆತನ ನೆರೆಹೊರೆಯಾತ ಶಿರಚ್ಛೇದನ ಮಾಡಿದ್ದಾನೆ. ಕತ್ತರಿಸಿದ ತಲೆಯನ್ನು ಕೆಲವು ನಿಮಿಷಗಳ ಕಾಲ ಹಿಡಿದು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗಿ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬುಧವಾರ ಸಂಜೆ ಗ್ರಾಮಸ್ಥರು ಭೀಕರ ಹತ್ಯೆಯನ್ನು ಪ್ರತಿಭಟಿಸಿದ ನಂತರ ಶಂಕ್ಲಾರಾಮ್ ಭೀಲ್ ಎಂದು ಗುರುತಿಸಲಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡ ನಂತರವೇ ಶವ ಪರೀಕ್ಷೆಗೆ ಸ್ಥಳದಿಂದ ಶವವನ್ನು ತೆಗೆದುಕೊಳ್ಳಲು ಪೊಲೀಸರಿಗೆ ಜನರು ಅವಕಾಶ ಮಾಡಿಕೊಟ್ಟಿದ್ದಾರೆ.

ಜಾಲೋರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮೇಶ್ವರಲಾಲ್ ಮೇಘವಾಲ್ ಹತ್ಯೆಯನ್ನು ದೃಢಪಡಿಸಿದ್ದಾರೆ.ಆರೋಪಿಯನ್ನು ಬಂಧಿಸಲಾಗಿದೆ‌. ಕೊಲೆ ಮಾಡಿದ ಮಾರಕಾಸ್ತ್ರ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕೊಲೆಯ ಉದ್ದೇಶದ ಬಗ್ಗೆ ಮಾತನಾಡಲು ಪೊಲೀಸರು ನಿರಾಕರಿಸಿದ್ದು, ಇಬ್ಬರ ನಡುವಿನ ವೈಯುಕ್ತಿಕ ದ್ವೇಷವೇ ಕೃತ್ಯಕ್ಕೆ‌ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಕಿಶೋರ್​ ಸಿಂಗ್​(23) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಆರೋಪಿ ಸಂಕ್ಲಾರಾಮ್ ಭೀಲ್ (50)ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ.

ಘಟನೆಗೆ ಖಂಡಿಸಿದ ಸ್ಥಳೀಯರು ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ ಕೊಡುವಂತೆ ಆಗ್ರಹಿಸಿದ್ದಾರೆ.

ಬುಧವಾರ ಸಂಜೆ 6.30ರ ಸುಮಾರಿಗೆ ಕಿಶೋರ್ ಸಿಂಗ್ ವಾಕಿಂಗ್ ಹೊರಟಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಶಂಕ್ಲಾರಾಮ್ ಭೀಲ್ ಹಿಂದಿನಿಂದ ಆತನ ಬಳಿಗೆ ಬಂದು ಕೊಡಲಿಯಿಂದ ಹಲ್ಲೆ ಶಿರಚ್ಛೇದ ಮಾಡಿದ್ದಾನೆ. ಸಿಂಗ್ ಸತ್ತ ನಂತರ ಆರೋಪಿ ಕತ್ತರಿಸಿದ ತಲೆಯೊಂದಿಗೆ ಸುಮಾರು 150 ಮೀಟರ್ ದೂರ ನಡೆದಿದ್ದಾನೆ ಎನ್ನಲಾಗಿದೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com