BIG NEWS; ಶಾಲೆಯಲ್ಲಿ ನಿರ್ಮಾಣ ಹಂತದ ಕೊಠಡಿಯ ಗೋಡೆ ಕುಸಿತ, ವಿದ್ಯಾರ್ಥಿ ಮೃತ್ಯು, ಇನ್ನೋರ್ವನಿಗೆ ಗಾಯ

BIG NEWS; ಶಾಲೆಯಲ್ಲಿ ನಿರ್ಮಾಣ ಹಂತದ ಕೊಠಡಿಯ ಗೋಡೆ ಕುಸಿತ, ವಿದ್ಯಾರ್ಥಿ ಮೃತ್ಯು, ಇನ್ನೋರ್ವನಿಗೆ ಗಾಯ

ಹುಬ್ಬಳ್ಳಿ; ನಿರ್ಮಾಣ ಹಂತದ ಶಾಲಾ ಕೊಠಡಿಯ ಗೋಡೆ ಕುಸಿದು ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿ ಗಾಯಗೊಂಡ ಘಟನೆ ಕಿರೇಸೂರ ಗ್ರಾಮದಲ್ಲಿ ನಡೆದಿದೆ.

ಕಿರೇಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ವಿಸ್ತೃತ ಬೆಳಗಲಿ (9) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.

ಘಟನೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ನಾಗವಿ ಗಾಯಗೊಂಡಿದ್ದು ಈತನನ್ನು ಕಿಮ್ಸ್ ಗೆ ದಾಖಲಿಸಲಾಗಿದೆ.

ಮೃತ ವಿಶೃತ್ ನಿರ್ಮಾಣ ಹಂತದ ಕಟ್ಟಡದ ಕೆಳಭಾಗ ಆಟವಾಡುತ್ತಿದ್ದ. ಆಟವಾಡುವ ಸಂದರ್ಭದಲ್ಲಿ ಏಕಾಏಕಿ ನಿರ್ಮಾಣ ಹಂತದ ಗೋಡೆ ಕುಸಿದು ಬಿದ್ದಿದೆ.

ಘಟನೆಗೆ ಕಳಪೆ ಕಾಮಗಾರಿ‌ ಕಾರಣ ಎನ್ನಲಾಗುತ್ತಿದೆ.‌ ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…

ಟಾಪ್ ನ್ಯೂಸ್