ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್
ಶಾಕಿಂಗ್ ಆದೇಶವನ್ನು ಕೊಟ್ಟಿದ್ದು, ತನ್ನ ಮಗಳಿಗೆ ಇಟ್ಟ ಹೆಸರನ್ನು ದೇಶದಲ್ಲಿ ಯಾರಿಗೂ ಇಡಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.
ತನ್ನ ಮಗಳಿಗೆ ಇಟ್ಟಿರುವ ಹೆಸರನ್ನು ಉತ್ತರ ಕೊರಿಯಾದಲ್ಲಿ ಯಾರೂ ಇಡುವಂತಿಲ್ಲ.ಒಂದು ವೇಳೆ ಈ ಹೆಸರು ಬಳಕೆ ಮಾಡಿದ್ದರೆ ತಕ್ಷಣವೇ ಬದಲಿಸುವಂತೆ ಸೂಚಿಸಲಾಗಿದೆ.ಆದೇಶ ಮೀರಿದರೆ ಶಿಕ್ಷೆಯನ್ನು ನೀಡುವುದಾಗಿಯೂ ಎಚ್ಚರಿಕೆಯನ್ನು ನೀಡಲಾಗಿದೆ.
ಕಿಮ್ ಜಾಂಗ್ ಉನ್ ಮಗಳ ಹೆಸರು ಕಿಮ್ ಜು ಏ.
9ರ ಹರೆಯದ ಕಿಮ್ ಜು ಏ ಉತ್ತರ ಕೊರಿಯಾದ ಮುಂದಿನ ಉತ್ತರಾಧಿಕಾರಿ ಎಂದು ಬಿಂಬಿತರಾಗಿದ್ದಾರೆ.
ಕಿಮ್ ಜಾನ್ ಉನ್ ಆದೇಶದ ಬೆನ್ನಲ್ಲೇ ಮಗಳ ಹೆಸರು ಇಟ್ಟಂತಹ ಬಾಲಕಿಯರ ಹೆಸರು ಬದಲಿಸಲು ಅಧಿಕಾರಿಗಳು ಖಡಕ್ ಸೂಚನೆ ಪೋಷಕರಿಗೆ ಸೂಚಿಸಿದ್ದಾರೆ.