ಮನೆಯೊಂದರ ಮುಂದೆ ಕಂಡು ಬಂದ ಕಿಡ್ನಿ, ಲಿವರ್ ಮಾರಾಟಕ್ಕಿದೆ ಎಂಬ ಪೋಸ್ಟರ್

ಮನೆಯೊಂದರ ಮುಂದೆ ಕಂಡು ಬಂದ ಕಿಡ್ನಿ, ಲಿವರ್ ಮಾರಾಟಕ್ಕಿದೆ ಎಂಬ ಪೋಸ್ಟರ್

ತಿರುವನಂತಪುರಂ;ಆರ್ಥಿಕ ಸಂಕಷ್ಠದಿಂದ ವ್ಯಕ್ತಿಯೋರ್ವರು ಮನೆಯೊಂದರ ಮುಂದೆ ಕಿಡ್ನಿ, ಲಿವರ್ ಮಾರಾಟಕ್ಕಿದೆ ಎಂಬ ಪೋಸ್ಟರ್ ಹಾಕಿಕೊಂಡಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.

ಜಾಹೀರಾತಿನ ಜೊತೆಗೆ ಎರಡು ಫೋನ್ ನಂಬರ್‌ಗಳನ್ನು ಕೂಡ ಹಾಕಲಾಗಿತ್ತು.ಮಣಕಾಡು ಪುಥೇನ್ ರಸ್ತೆಯ ಸಂತೋಷ್ ಕುಮಾರ್ (50) ಎನ್ನುವವರು ಜೀವನದ ನಿರ್ವಹಣೆಗೆ ಮತ್ತು ಚಿಕಿತ್ಸೆಗೆ ದಿಕ್ಕು ತೋಚದ ಬೋರ್ಡ್ ಹಾಕಿದ್ದರು.

ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಣಿಚೀಲ ಎತ್ತುವ ವೇಳೆ ಅವಘಡ ಸಂಭವಿಸಿ ಚಿಕಿತ್ಸೆಗೆ ಒಳಗಾಗಿದ್ದರು.
ಆದರೆ ಚಿಕಿತ್ಸೆ ಮುಂದುವರಿಸಲು ಮಣಕಾಡು ಊರಿನ ಜಂಕ್ಷನ್‌ನಲ್ಲಿರುವ ಕುಟುಂಬದ ಒಂದು ಭೂಮಿಯನ್ನು ಮಾರಾಟ ಮಾಡಲು ಅವರು ಬಯಸಿದ್ದರು. ಆದರೆ, ಜಮೀನಿನ ವಿಚಾರವಾಗಿ ಸಹೋದರನ ಜತೆ ಜಗಳವಾಗಿತ್ತು.ಮಾರಾಟವು ನಿಂತು ಹೋಗಿದೆ.

ಆದ್ದರಿಂದ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಪ್ರಮುಖ ಅಂಗಗಳನ್ನು ಮಾರಾಟ ಮಾಡುವುದೊಂದೆ ದಾರಿ ಎಂದು ಕಂಡುಕೊಂಡ ಅವರು ಕಿಡ್ನಿ,‌ಲಿವರ್ ಮಾರಾಟಕ್ಕೆ ಮುಂದಾಗಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com