ಬಾಲಕನಿಗೆ ಕೊಲೆ ಮಾಡಿ ದಿಕ್ಕು ತಪ್ಪಿಸಲು “ಅಲ್ಲಾ ಹು ಅಕ್ಬರ್” ಎಂದು ಬರೆದ ಶಿಕ್ಷಕಿ & ಆಕೆಯ ಗೆಳೆಯ

ಉತ್ತರಪ್ರದೇಶ;ಕಾನ್ಪುರದಲ್ಲಿ 17ವರ್ಷದ ಬಾಲಕನನ್ನು ಶಿಕ್ಷಕಿ ಮತ್ತು ಆಕೆಯ ಗೆಳೆಯ ಕೊಲೆ ಮಾಡಿದ್ದು, ಪ್ರಕರಣದ ದಿಕ್ಕು ತಪ್ಪಿಸಲು ಪತ್ರದಲ್ಲಿ ಅಲ್ಲಾ ಹು ಅಕ್ಬರ್, ಅಲ್ಲಾಹನಲ್ಲಿ ನಂಬಿಕೆ ಇಡಿ ಎಂದು ಬರೆದಿರುವುದು ಪತ್ತೆಯಾಗಿದೆ.

10ನೇ ತರಗತಿ ವಿದ್ಯಾರ್ಥಿಯ ಮೃತದೇಹವನ್ನು ಆರೋಪಿಯ ಮನೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ ಬಳಿಕ ಪೊಲೀಸರಿಗೆ ಕೊಲೆ ರಹಸ್ಯ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂದಿಸಿ ಬಾಲಕನ ಟ್ಯೂಷನ್ ಶಿಕ್ಷಕಿ ರಚಿತಾ ಮತ್ತು ಆಕೆಯ ಗೆಳೆಯ ಪ್ರಭಾತ್ ಶುಕ್ಲಾ ಮತ್ತು ಆರ್ಯನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಗೆಳತಿಯೊಂದಿಗೆ ಬಾಲಕ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇರೆಗೆ ಆರೋಪಿಯು ಬಾಲಕನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ‌.

ಮೃತ ಬಾಲಕ ಕಾನ್ಪುರದ ಪ್ರಮುಖ ಬಟ್ಟೆ ವ್ಯಾಪಾರಿಯ ಪುತ್ರನಾಗಿದ್ದು, ಆತ ಕೋಚಿಂಗ್ ತರಗತಿಗಳಿಗೆಂದು ಸಂಜೆ ಸ್ಕೂಟರ್‌ನಲ್ಲಿ ಮನೆಯಿಂದ ಹೊರಟು ವಾಪಸ್ ಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಂತರ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಸ್ಕೂಟರ್‌ನಲ್ಲಿ ಬಾಲಕನ ಮನೆಗೆ ಆಗಮಿಸಿ, ತಮ್ಮ ಮಗನನ್ನು ಸುರಕ್ಷಿತವಾಗಿ ಹಿಂದಿರುಗಿಸಲು 30ಲಕ್ಷ ರೂ.ಗಳನ್ನು ನೀಡಬೇಕೆಂದು ಎಂಬ ಬೆದರಿಕೆ ಪತ್ರವನ್ನು ನೀಡಿ ಹೋಗಿದ್ದಾನೆ.

ಪತ್ರದಲ್ಲಿ “ಅಲ್ಲಾ ಹು ಅಕ್ಬರ್, ಅಲ್ಲಾಹನಲ್ಲಿ ನಂಬಿಕೆ ಇಡಿ” ಎಂದು ಸಹ ಬರೆಯಲಾಗಿದ್ದು,ಈ ಪತ್ರವು ತನಿಖೆಯ ದಿಕ್ಕು ತಪ್ಪಿಸುವ ತಂತ್ರವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಬಾಲಕ ಆರೋಪಿಯೊಂದಿಗೆ ಸ್ಟೋರ್ ರೂಮ್‌ಗೆ ಹೋಗುತ್ತಿರುವುದು ಕಂಡು ಬಂದಿದೆ. ಕೆಲವು ನಿಮಿಷಗಳ ನಂತರ ಶುಕ್ಲಾ ಸ್ಟೋರ್ ರೂಂನಿಂದ ಹೊರಬಂದನಾದರೂ, ಆದರೆ ಹುಡುಗ ಹೊರಬಂದಿರಲಿಲ್ಲ.ನಂತರ ಆರೋಪಿ ಬಟ್ಟೆ ಬದಲಿಸಿ ಬಾಲಕನ ಸ್ಕೂಟರ್‌ನಲ್ಲಿ ಹೋಗುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್