ಮಂಗಳೂರು;ಸಚಿವಾಕಾಂಕ್ಷಿಯಾಗಿದ್ದ ಶಾಸಕ ಯುಟಿ ಖಾದರ್ ಗೆ ಸ್ಪೀಕರ್ ಹುದ್ದೆ ಕೊಟ್ಟು ಹೈಕಮಾಂಡ್ ಕೈಕಟ್ಟಿ ಹಾಕಿದ್ದು,ಒಲ್ಲದ ಮನಸ್ಸಿನಿಂದ ಯುಟಿ ಖಾದರ್ ಒಪ್ಪಿಕೊಳ್ಳುವಂತಾಗಿದೆ.
ಮಂಗಳೂರು ಕ್ಷೇತ್ರದಿಂದ ಐದನೇ ಬಾರಿಗೆ ಗೆಲುವು ದಾಖಲಿಸಿಕೊಂಡಿರುವ ಖಾದರ್ ರಾಜ್ಯದ ಹಿರಿಯ ಶಾಸಕರಲ್ಲಿ ಓರ್ವರು.ಈ ಬಾರಿ ಖಾದರ್ ಡಿಸಿಎಂ ಅಥವಾ ಪ್ರಭಾವಿ ಖಾತೆಯ ಮೇಲೆಯೇ ಕಣ್ಣಿಟ್ಟಿದ್ದರು.ಆದರೆ ಇದೀಗ ಒಲ್ಲದ ಮನಸ್ಸಿನಿಂದಲೇ ತಲೆಯಾಡಿಸಿ ಯುಟಿ ಖಾದರ್ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಒಂದೆಡೆ ಕರಾವಳಿಯಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನ ಗೆದ್ದಿದೆ.ಇದರಿಂದ ಕರಾವಳಿಯ ಶಾಸಕರಿಗೆ ಸಚಿವ ಸ್ಥಾನ ಕೊಡುವುದಕ್ಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ. ಮತ್ತೊಂದೆಡೆ ಹಿರಿತನದ ದೃಷ್ಟಿಯಲ್ಲಿ ಖಾದರ್ ಗೆ ಸಚಿವ ಸ್ಥಾನ ಕೊಡಬೇಕಾದ ಅನಿವಾರ್ಯತೆ ಹೈಕಮಾಂಡ್ ಮುಂದಿತ್ತು.
ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಕೆಲಸ ಮಾಡಿದ ಅನುಭವ ಯು.ಟಿ. ಖಾದರ್ ಹೊಂದಿದ್ದಾರೆ.ಕಳೆದ ಎರಡು ಬಾರಿಯ ಸಚಿವರಾಗಿದ್ದ ವೇಳೆ ಮಾದರಿಯಾಗಿ ಕೆಲಸ ಕೂಡ ಮಾಡಿದ್ದರು.
ಕಾಂಗ್ರೆಸ್ ಬಹುಮತ ಪಡೆಯುತ್ತಿದ್ದಂತೆ ರಾಜ್ಯದಲ್ಲಿ ಸಚಿವಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.ಜಿಲ್ಲಾವಾರು, ಜಾತಿವಾರು ಲೆಕ್ಕಾಚಾರದ ಮೂಲಕ ಮಂತ್ರಿ ಸ್ಥಾನ ಹಂಚಿಕೆ ಮಾಡಬೇಕಿದೆ.
ಇನ್ನು ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಕರಾವಳಿಯಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ.ಖಾದರ್ ಗೆ ದ.ಕ ಉಸ್ತುವಾರಿ ಸಚಿವ ಸ್ಥಾನ ತಪ್ಪಿದ್ದಕ್ಕೆ ಮುಸ್ಲಿಮರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಮುಸ್ಲಿ ಸಮುದಾಯದಿಂದ ಈಗಾಗಲೇ ಜಮೀರ್ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.ಇದಲ್ಲದೆ ಹಿರಿಯ ಸಚಿವರು ಕೂಡ ಆಕಾಂಕ್ಷಿತರಿದ್ದಾರೆ.ಈಗಿರುವಾಗ ಕಾಂಗ್ರೆಸ್ ಗೆ ಖಾದರ್ ಗೆ ಸಚಿವರಾಗಿ ಆಯ್ಕೆ ಮಾಡುವುದು ಕಾಂಗ್ರೆಸ್ ಗೆ ಕಗ್ಗಂಟಾಗಿತ್ತು.ಇದರಿಂದಾಗಿ ಖಾದರ್ ಗೆ ಮನವೊಲಿಸಿ ಹೈಕಮಾಂಡ್ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸುವಂತೆ ಮಾಡಿದೆ.