ಚಾಕಲೇಟು ತಿಂದ ಬಳಿಕ ಅಸ್ವಸ್ಥಗೊಂಡು ಇಬ್ಬರು ಬಾಲಕಿಯರು ಮೃತ್ಯು

ಚಾಕಲೇಟು ತಿಂದ ಬಳಿಕ ಅಸ್ವಸ್ಥಗೊಂಡು ಇಬ್ಬರು ಬಾಲಕಿಯರು ಮೃತ್ಯು

ಉತ್ತರಪ್ರದೇಶ;ಚಾಕೊಲೇಟ್ ತಿಂದ ಬಳಿಕ ಅಸ್ವಸ್ಥಗೊಂಡು ಇಬ್ಬರು ಪುಟ್ಟ ಬಾಲಕಿಯರು ನಿಗೂಢವಾಗಿ ಮೃತಪಟ್ಟ ಘಟಮೆ ಕೌಶಂಬಿ ಜಿಲ್ಲೆಯ ಕಾಡಾಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಾಧನಾ(7) ಮತ್ತು ಶಾಲಿನಿ (4) ಎಂಬ ಸಹೋದರಿಯರು ಗುರುವಾರ ಬೆಳಿಗ್ಗೆ ಚಾಕೊಲೇಟ್ ಸೇವಿಸಿ ಅಸ್ವಸ್ಥರಾಗಿದ್ದರು.

ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.ಆದರೆ ಚಿಕಿತ್ಸೆ ವೇಳೆ ಇಬ್ಬರೂ ಮೃತಪಟ್ಟರು ಎಂದು ವೃತ್ತ ನಿರೀಕ್ಷಕ ಅವದೇಶ್ ವಿಶ್ವಕರ್ಮ ಹೇಳಿದ್ದಾರೆ.

ಮೃತಪಟ್ಟ ಬಾಲಕಿಯರ ಜೊತೆ ನೆರೆಮನೆಯ ವರ್ಷಾ (7) ಮತ್ತು ಆರುಷಿ (4) ಎಂಬ ಇಬ್ಬರು ಮಕ್ಕಳು ಕೂಡಾ ಚಾಕೊಲೇಟ್ ಸೇವಿಸಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಧನಾ ಮತ್ತು ಶಾಲಿನಿಯವರ ತಂದೆ ನೀಡಿದ ದೂರಿನ ಪ್ರಕಾರ ನೆರೆಮನೆಯವರೊಬ್ಬರು ಈ ಚಾಕೊಲೇಟ್ ನೀಡಿದ್ದರು ಎನ್ನಲಾಗಿದೆ.ಇದಕ್ಕೆ ಏನಾದರೂ ಬೆರೆಸಿದ್ದಾರೆಯೇ ಎಂದು ತಿಳಿದು ಬರಬೇಕಿದೆ.ಬಾಲಕಿಯರ ಪೋಷಕರು ವ್ಯಕ್ತಿಯೋರ್ವನ ಮೇಲೆ ವಿಷ ಪ್ರಶಾನ ಮಾಡಿದ ಆರೋಪ ಮಾಡಿದ್ದಾರೆ.

ಪ್ರಕರಣದ ಬಗ್ಗೆ ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್