ಕೇರಳ; ರೈಲಿನೊಳಗೆ ಬೆಂಕಿ ಹಚ್ಚಲು ಯತ್ನ, ಆರೋಪಿಗೆ ಮಾನಸಿಕ ಅಸ್ವಸ್ಥ ಎಂದ ಪೊಲೀಸರು!

ಕೋಝಿಕೋಡ್:ಕಣ್ಣೂರು-ಎರ್ನಾಕುಲಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಲು ಯತ್ನಿಸಿದ ನಂತರ ಪ್ರಯಾಣಿಕರು ಆರ್‌ಪಿಎಫ್‌ಗೆ ಹಸ್ತಾಂತರಿಸಿದ ಆರೋಪಿಗೆ ರಿಮಾಂಡ್ ಮಾಡಲಾಗಿದೆ.

ಮಹಾರಾಷ್ಟ್ರದ ಲೋಹರಾ ಅಕೋಲಾ ಮೂಲದ ಸಚಿನ್ ಪ್ರಮೋದ್ ಬಾಕಲ್ (20) ಎಂಬಾತನನ್ನು ಕೋಝಿಕ್ಕೋಡ್ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ಕಾಲ ರಿಮಾಂಡ್ ವಿಧಿಸಿದೆ.

ಈತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ದೃಢಪಡಿಸಿದ್ದರೂ, ಎಲತ್ತೂರು ಮತ್ತು ಕಣ್ಣೂರು ರೈಲಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ.

ಈತನ ಬಗ್ಗೆ ಮಹಾರಾಷ್ಟ್ರದಲ್ಲಿ ವಿಚಾರಣೆ ನಡೆಯುತ್ತಿದೆ
ಟಿಕೆಟ್ ತೆಗೆದುಕೊಳ್ಳದ ಕಾರಣ ಈತ ಎಲ್ಲಿಂದ ರೈಲು ಹತ್ತಿದರು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

ಆರೋಪಿ ಮಾನಸಿಕ ಅಸ್ವಸ್ಥ ಎಂದು ಕುಟುಂಬದವರು ಹೇಳಿದ್ದಾರೆ.ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ವಡಕರ ಮತ್ತು ಕೋಝಿಕ್ಕೋಡ್ ನಡುವೆ ಕಣ್ಣೂರು-ಎರ್ನಾಕುಲಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಲು ಯತ್ನಿಸಲಾಗಿತ್ತು ಎಂದು ವರದಿಯಾಗಿದೆ.

5ನೇ ಜನರಲ್ ಕೋಚ್ ನಲ್ಲಿದ್ದ ಆರೋಪಿ ರೈಲಿನೊಳಗೆ ಪ್ಲಾಸ್ಟಿಕ್ ಸ್ಟಿಕ್ಕರ್ ಗೆ ಲೈಟರ್ ನಿಂದ ಬೆಂಕಿ ಹಚ್ಚಲು ಯತ್ನಿಸಿದ್ದಾನೆ.

ಇದನ್ನು ಪ್ರಯಾಣಿಕರು ಕಂಡಾಗ ಈತ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನನ್ನು ಹಿಡಿದು ಆರ್‌ಪಿಎಫ್‌ಗೆ ಒಪ್ಪಿಸಿದ್ದಾರೆ‌.ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಟಾಪ್ ನ್ಯೂಸ್