ಹಿಂದೂ ಮಕ್ಕಳಿಗೆ ತಾಯ್ತತನದ ಪ್ರೀತಿಯುಣಿಸಿದ ಜುಬೈದಾ; ತೆರೆಯ ಮೇಲೆ ನೈಜ ಕೇರಳ ಸ್ಟೋರಿ…

ದಿ ಕೇರಳ ಸ್ಟೋರಿ ಎಂಬ ಚಲನ‌ಚಿತ್ರ ದೇಶದಲ್ಲಿ ಕಲ್ಪಿತ ಅಂಶ ಎಂದು ವಿವಾದಕ್ಕೆ ಈಡಾದರೆ ಇತ್ತ ಅಸಲಿ ಕೇರಳ ಸ್ಟೋರಿಯೊಂದು ತೆರೆಯ ಮೇಲೆ ಬರಲಿದೆ.

ಚಲನಚಿತ್ರ ನಿರ್ಮಾಪಕ ಸಿದ್ದಿಕ್ ಪರವೂರ್ “ಎನ್ನುಮ್ ಸ್ವಂತಂ ಶ್ರೀಧರನ್” ಎಂಬ ಮಲಯಾಳ ಚಿತ್ರವನ್ನು ನಿರ್ಮಾಪಣೆಗೆ ಮುಂದಾಗಿದ್ದಾರೆ.

“ಎನ್ನುಮ್ ಸ್ವಂತಂ ಶ್ರೀಧರನ್” ಚಿತ್ರವು ನಿಜವಾದ ಕಥೆಯನ್ನಾಧರಿಸಿದೆ. ಮಲಪ್ಪುರಮ್ ನಿವಾಸಿ ಮುಸ್ಲಿಂ ಮಹಿಳೆ ಜುಬೈದಾ ತಮ್ಮ ಮನೆಗೆಲಸದ ಚಾಕಿ ಎಂಬ ಹಿಂದೂ ಮಹಿಳೆಯ ಮಕ್ಕಳನ್ನು ಚಾಕಿಯ ಮರಣದ ನಂತರ ತನ್ನದೇ ಮಕ್ಕಳಂತೆ ಬೆಳೆಸಿದ ಕಥೆಯಾಗಿದೆ.

ಜುಬೈದಾ ಸಾಕಿದ್ದು ಚಾಕಿಯ ಮಕ್ಕಳನ್ನಾದರೂ ಆಕೆ ಮುಸ್ಲಿಂ ಧರ್ಮದ ಆಚಾರ ವಿಚಾರಗಳನ್ನು ಮಕ್ಕಳಿಗೆ ಹೇರುವುದ.ಅಂತೆಯೇ ಹಿಂದೂ ಪದ್ಧತಿಯಲ್ಲಿಯೇ ಮಕ್ಕಳನ್ನು ಬೆಳೆಸಿದ್ದಾರೆ.

ಪತಿಯಿಂದ ದೂರವಾಗಿದ್ದ ಚಾಕಿ, ಜುಬೇದಾ ಅವರ ಮನೆಯಲ್ಲಿ ಬಳಿ ಮನೆಗೆಲಸ ಮಾಡಿಕೊಂಡಿರುತ್ತಾರೆ.ಚಾಕಿ ತನ್ನ ಮಕ್ಕಳ ಜೊತೆ ಜುಬೈದಾ ಅವರ ಮನೆಯಲ್ಲಿ ವಾಸಿಸುತ್ತಿದ್ದರು.

2019 ರಲ್ಲಿ ಜುಬೈದಾ ಮರಣ ಹೊಂದಿದಾಗ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದ ಸಾಕು ಮಗ ಶ್ರೀಧರ್ ಫೇಸ್‌ಬುಕ್‌ನಲ್ಲಿ ಮನಕಲಕುವ ಪೋಸ್ಟ್ ಹಾಕುತ್ತಾರೆ.

ಚಿತ್ರ ನಿರ್ಮಾಪಕ ಸಿದ್ಧಿಕ್ ಪರವೂರ್ ಜುಬೈದಾ ಹಾಗೂ ಮಕ್ಕಳ ಕುರಿತು ಚಿತ್ರ ನಿರ್ಮಿಸುವ ಮೊದಲೇ ಜುಬೈದಾ ಅವರನ್ನು ಮಲಪ್ಪುರಮ್‌‌ನಲ್ಲಿ ಭೇಟಿಯಾಗಿದ್ದಾರೆ.

ಜುಬೈದಾ ಸಂಪೂರ್ಣ ಗ್ರಾಮದಲ್ಲಿಯೇ ಅಮ್ಮ ಎಂದೇ ಕರೆಯಿಸಿಕೊಳ್ಳುತ್ತಿದ್ದರು. ಸ್ಥಳೀಯ ಚರ್ಚ್ ಕೂಡ ಅವರ ಮರಣದ ಪ್ರಾರ್ಥನಾ ಸಭೆಯನ್ನು ಆಯೋಜಿಸುವಷ್ಟರ ಮಟ್ಟಿಗೆ ಜುಬೈದಾ ತಮ್ಮೂರಿನಲ್ಲಿ ಪ್ರೀತಿ ಪಾತ್ರರಾಗಿದ್ದರು.

ಪರವೂರ್ ತಮ್ಮ ಚಿತ್ರವನ್ನು ಸ್ಥಳೀಯ ನಂಬೂದರಿ ಬ್ರಾಹ್ಮಣರ ನಿವಾಸದಲ್ಲಿ ಚಿತ್ರೀಕರಿಸಿದ್ದು ಸಿದ್ಧಿಕ್ ಪರವೂರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರವಾದ “ಎನ್ನುಮ್ ಸ್ವಂತಂ ಶ್ರೀಧರನ್‌” ನಲ್ಲಿ ನಿರ್ಮಲಾ ಕಣ್ಣನ್ ಜುಬೇದಾ ಮತ್ತು ಸುರೇಶ್ ನೆಲ್ಲಿಕೋಡ್, ನಿಲಂಬೂರ್ ಆಯಿಷಾ ಪಾತ್ರವನ್ನು ಮಾಡಿದ್ದಾರೆ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com