ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ ಮೊದಲು ತನ್ನ ಪ್ರೇಮಿ ಯೂಸುಫ್‌ ಎಂಬಾತನೊಂದಿಗೆ ಓಡಿಹೋಗಿದ್ದಾಳೆ.

ಗಮನಾರ್ಹ ಸಂಗತಿಯೆಂದರೆ, ಯೂಸುಫ್‌ನಿಂದ ದೂರವಿರುವಂತೆ ಭೋಪಾಲ್‌ನ ಬಿಜೆಪಿಯ ಸಂಸದೆ (MP) ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬಾಲಕಿಗೆ ಸಲಹೆ ನೀಡಿದ್ದರು.
ಇದಲ್ಲದೆ ಪ್ರಜ್ಞಾ ಸಿಂಗ್ ಠಾಕೂರ್ ಹುಡುಗಿಯನ್ನು ಕೇರಳ ಸ್ಟೋರಿ ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದರು.ಆದರೆ ಮರು ದಿನವೇ ಆಕೆ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ.

ಕೇರಳ ಸ್ಟೋರಿ ಕೇರಳದ ಹಿಂದೂ ಮಹಿಳೆಯ ಕಥೆ ಎಂದು ಹೇಳಲಾಗಿದೆ.ಇದರಲ್ಲಿ ಅದಾ ಶರ್ಮಾ ನಟಿಸಿದ್ದಾರೆ.
ಭೋಪಾಲ್‌ನ ನಯಾ ಬಸೆರಾ ಪ್ರದೇಶದಲ್ಲಿ ವಾಸಿಸುವ 19 ವರ್ಷದ ಯುವತಿ ನೆರೆಯ ಯೂಸುಫ್ ಎಂಬಾತನ ಜೊತೆ ಪರಾರಿಯಾಗಿದ್ದಾರೆ.

ಮೇ 30 ರಂದು ನಿಗದಿಯಾಗಿದ್ದ ಮದುವೆಗೆ ಮುನ್ನವೇ ಬಾಲಕಿ ಯೂಸುಫ್ ಜೊತೆಗೆ ತನ್ನ ಮದುವೆಗೆಂದು ಇಟ್ಟಿದ್ದ ನಗದು ಮತ್ತು ಚಿನ್ನಾಭರಣಗಳೊಂದಿಗೆ ಓಡಿ ಹೋಗಿದ್ದಾಳೆ ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ.

ಭೋಪಾಲ್‌ನ ಕಮಲಾ ನಗರ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ, ಹುಡುಗಿಯ ಕುಟುಂಬವು ಯೂಸುಫ್ ತಮ್ಮ ಮಗಳನ್ನು ತನ್ನ ಸಿಹಿ ಮಾತುಗಳಿಂದ ಮೋಸ ಮಾಡಿದ್ದಾನೆ ಮತ್ತು ನಂತರ ಅವಳೊಂದಿಗೆ ಓಡಿಹೋಗಿದ್ದಾನೆ ಎಂದು ಆರೋಪಿಸಿದ್ದಾರೆ.

ಯೂಸುಫ್, ಹುಡುಗಿಯ ಹೆಸರಿನಲ್ಲಿ ಬ್ಯಾಂಕ್ ಸಾಲವನ್ನು ಸಹ ತೆಗೆದುಕೊಂಡಿದ್ದಾನೆ ಮತ್ತು ಅದರ ಸಮಾನ ಮಾಸಿಕ ಕಂತು (ಇಎಂಐ) ಪಾವತಿಸುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿ ಪೊಲೀಸರ ಮುಂದೆ ತನ್ನ ತಪ್ಪೊಪ್ಪಿಗೆಯಲ್ಲಿ, ತನ್ನ ಸ್ವಂತ ಇಚ್ಛೆಯ ಮೇರೆಗೆ ಯೂಸುಫ್ ಜೊತೆ ಓಡಿಹೋಗಿದ್ದೇನೆ ಎಂದು ಹೇಳಿದ್ದಾಳೆ.

ಟಾಪ್ ನ್ಯೂಸ್