ಕೇರಳ;’ದಿ ಕೇರಳ ಸ್ಟೋರಿ’ ಚಿತ್ರದ ಟ್ರೈಲರ್‌ನಲ್ಲಿ ಹೇಳಿದಂತೆ ಕೇರಳದಲ್ಲಿ 32,000 ಹಿಂದೂ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿ, ಉಗ್ರವಾದಿ ಐಸಿಸ್‌ಗೆ ಸೇರ್ಪಡೆ ಮಾಡಲಾಗಿದೆ ಎಂಬುವುದನ್ನು ಸಾಬೀತು ಪಡಿಸಿದರೆ ಒಂದು ಕೋಟಿ ನಗದು ಬಹುಮಾನ ನೀಡುವುದಾಗಿ ಮುಸ್ಲಿಂ ಯೂತ್ ಲೀಗ್ ಸವಾಲು ಹಾಕಿರುವ ಬಗ್ಗೆ ವರದಿಯಾಗಿದೆ.
ಇದಲ್ಲದೆ ಲೇಖಕ ನಝೀರ್ ಹುಸೇನ್ ಅವರು ವಲಸೆ ಹೋಗಿರುವ 32,000 ಯುವತಿಯರ ಪೈಕಿ ಕನಿಷ್ಠ 10 ಯುವತಿಯರನ್ನಾದರೂ ಬಲವಂತವಾಗಿ ಮತಾಂತರಗೊಳಿಸಿ, ಐಸಿಸ್‌ಗೆ ಸೇರ್ಪಡೆ ಮಾಡಲಾಗಿದೆ ಎಂಬ ಬಗ್ಗೆ ಪುರಾವೆ ಒದಗಿಸಿದರೆ ರೂ. 10 ಲಕ್ಷ ಬಹುಮಾನ ನೀಡುವೆ ಎಂದು ಸವಾಲು ಹಾಕಿದ್ದಾರೆ.
ಮಲಯಾಳಂ ನಟ ಹಾಗೂ ವಕೀಲ ಎಸ್.ಶುಕ್ಕೂರ್, ಬಲವಂತವಾಗಿ ಮತಾಂತರಿಸಿ, ಐಸಿಸ್ ಸದಸ್ಯರನ್ನಾಗಿಸಿರುವ
32 ಕೇರಳ ಯುವತಿಯರ ಬಗ್ಗೆ ಯಾರಾದರೂ ಮಾಹಿತಿ ಪ್ರಕಟಿಸಿದರೆ, ಅಂಥವರಿಗೆ ರೂ. 11 ಲಕ್ಷ ನಗದು ನೀಡುವುದಾಗಿ ಘೋಷಿಸಿದ್ದಾರೆ.
ವಿವಾದಾತ್ಮಕ ದಿ ಕೇರಳ ಸ್ಟೋರಿ ಚಿತ್ರ ಮೆ.5ಕ್ಕೆ ತೆರೆ ಕಾಣಲಿದೆ.ಇದಕ್ಕೆ ಅನುಮತಿ ನೀಡದಂತೆ ಹಲವು ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯ್ ವಿಜಯನ್, ಚಲನಚಿತ್ರವನ್ನು ಸಂಘಪರಿವಾರದ ಸುಳ್ಳಿನ ಕಾರ್ಖಾನೆಯ ಉತ್ಪನ್ನ ಎಂದು ಹೇಳಿದ್ದರು.
‘ದಿ ಕೇರಳ ಸ್ಟೋರಿ’ ಚಿತ್ರದ ಟ್ರೈಲರ್‌ನಲ್ಲಿ ಕೇರಳದ 32,000 ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿ, ನಂತರ ಉಗ್ರವಾದಿ ಸಂಘಟನೆಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಲಾಗಿತ್ತು.