ತಿರುವನಂತಪುರ:ಕೇರಳದಲ್ಲಿ ನಿಫಾ ವೈರಸ್ ರೋಗಿಯ ಆರೈಕೆ ಮಾಡಿ ಮೃತಪಟ್ಟಿದ್ದ ನರ್ಸ್ ಲಿನಿ ಪತಿ ಎರಡನೇ ವಿವಾಹವಾಗಿದ್ದಾರೆ.
ಲಿನಿ ಪತಿ ಸಜೀಶ್ ಅವರು ಪ್ರತಿಭಾಳನ್ನು ವರಿಸಿದ್ದಾರೆ.
ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸ್ಥಳೀಯ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹ ನಡೆದಿದೆ.
2018ರಲ್ಲಿ ನಿಫಾ ವೈರಸ್‌ನಿಂದ ಲಿನಿ ಮೃತಪಟ್ಟಿದ್ದಾರೆ. ಆ ಬಳಿಕ ಸಜೀಶ್ ಅವರು ಬಹ್ರೈನ್ ಕೆಲಸ ಬಿಟ್ಟು ತವರಿಗೆ ಮರಳಿದ್ದರು.ನಂತರ ಸರ್ಕಾರ ಅವರಿಗೆ ಆರೋಗ್ಯ ಇಲಾಖೆಯಲ್ಲಿ ಕೆಲಸ ನೀಡಿದೆ.
ಸಜೀಶ್ ಹಾಗೂ ಪ್ರತಿಭಾಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹಾಗೂ ಮಾಜಿ ಸಚಿವೆ ಕೆಕೆ ಶೈಲಜಾ ಶುಭಹಾರೈಸಿದ್ದಾರೆ.
ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ದಾಖಲಾದ ಮೊದಲ ನಿಫಾ ವೈರಸ್ ಸೋಂಕು ತಗುಲಿದ್ದ ರೋಗಿಗೆ ಲಿನಿ ಚಿಕಿತ್ಸೆ ನೀಡಿದ್ದರು.ಈ ವೇಳೆ ಅವರಿಗೂ ಸೋಂಕು ಹರಡಿತ್ತು. ತಮಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಪತಿಗೆ ಪತ್ರ ಬರೆದಿದ್ದ ಅವರು,ನಾನು ಬಹುತೇಕ ಸಾಯುವುದು ಖಚಿತವಾಗಿದೆ.ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಅನ್ನಿಸುತ್ತಿಲ್ಲ.ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ.
ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ.ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ತಿಳಿಸಿದ್ದರು.
ಬಳಿಕ ಚಿಕಿತ್ಸೆ ಫಲಿಸದೆ ಸಾವಿಗೀಡಾದ ಲಿನಿ ಅವರ ಮೃತ ದೇಹವನ್ನು ನಿಫಾ ವೈರಸ್ ಹಿನ್ನೆಲೆ ಯಾರಿಗೂ ತೋರಿಸದೆ ಅಂತ್ಯಸಂಸ್ಕಾರ ಮಾಡಲಾಗಿತ್ತು.