ಕೇರಳ;ಮೃತದೇಹದ ಜೊತೆ ನಗುತ್ತಾ ಗ್ರೂಪ್ ಫೋಟೋ ತೆಗೆದು ಸಂಭ್ರಮದಿಂದ ಕಳುಹಿಸಿಕೊಟ್ಟ ಕುಟುಂಬ; ಅಪರೂಪದ ಘಟನೆ, ಸಾವಿನ ಮನೆಯಾದರೂ ಇವರು ಸಂಭ್ರಮದಿಂದ ಬೀಳ್ಕೊಟ್ಟಿದ್ದೇಕೆ ಗೊತ್ತಾ?

ಮೃತದೇಹದ ಜೊತೆ ನಗುತ್ತಾ ಗ್ರೂಪ್ ಫೋಟೋ ತೆಗೆದು ಸಂಭ್ರಮದಿಂದ ಕಳುಹಿಸಿಕೊಟ್ಟ ಕುಟುಂಬ;ಅಪರೂಪದ ಘಟನೆ,ನಡೆದಿದ್ದೆಲ್ಲಿ ಗೊತ್ತಾ?
ಕೇರಳ;ಮರಣದ ಮನೆಯ ಫೋಟೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.

ಕೇರಳದ ಕುಟಂಬವೊಂದು ತಮ್ಮ ಕುಟುಂಬದ ಹಿರಿಯಜ್ಜಿಯನ್ನು ಬಹಳ ಸಂಭ್ರಮದಿಂದ ನಗುತ್ತಾ ಅಂತಿಮವಾಗಿ ಕಳುಹಿಸಿಕೊಟ್ಟಿದ್ದಾರೆ.
ಅಜ್ಜಿಯ ಶವಪೆಟ್ಟಿಗೆಯ ಮುಂದೆ ಇಡೀ ಕುಟುಂಬದ ಸದಸ್ಯರು ನಗು ನಗುತ್ತಾ ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಪತ್ತಣಂತಿಟ್ಟ ಜಿಲ್ಲೆಯ ಮಲ್ಲಪಲ್ಲಿ ಗ್ರಾಮದಲ್ಲಿ 95 ವರ್ಷದ ಮರಿಯಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು.ಅವರಿಗೆ ಒಂಭತ್ತು ಮಕ್ಕಳಿದ್ದು,19 ಮೊಮ್ಮಕ್ಕಳಿದ್ದರು.ಇವರೆಲ್ಲರೂ ವಿವಿಧ ದೇಶಗಳಲ್ಲಿ ಇದ್ದು,ಇವರ ಸಾವಿನ ಸಮಯದಲ್ಲಿ ಎಲ್ಲರೂ ಬಂದು ಮನೆ ಸೇರಿದ್ದರು.
ಮರಿಯಮ್ಮ ಖುಷಿಯಾಗಿ ತಮ್ಮ 95 ವರ್ಷ ಕಳೆದಿದ್ದಾರೆ‌. ಆಕೆ ಎಲ್ಲಾ ಮಕ್ಕಳು ಮೊಮ್ಮಕ್ಕಳನ್ನು ತುಂಬಾ ಇಷ್ಟ ಪಡುತ್ತಿದ್ದಳು.ಇವರೆಲ್ಲರೂ ಆಕೆಯೊಂದಿಗೆ ಕಳೆದ ಸಮಯದ ಬಗ್ಗೆ ನೆನಪಿಗಾಗಿ ಎಲ್ಲರೂ ಪಾರ್ಥಿವ ಶರೀರದ ಬಳಿ ನಗುತ್ತಾ ಫೋಟೋ ಕ್ಲಿಕ್ಕಿಸಿ ಕಳುಹಿಸಿಕೊಟ್ಟಿದ್ದಾರೆ‌.ಟಾಪ್ ನ್ಯೂಸ್