ಕೇರಳ;ಪತ್ನಿಯನ್ನು ಕೊಲೆ ಮಾಡಿ ವಿಕೃತ ಮನಸ್ಥಿತಿಯ ಪತಿಯೋರ್ವ ಮೃತದೇಹದ ಮೇಲೆ ಸಂಭೋಗ ಮಾಡಿರುವ ಪೈಶಾಚಿಕ ಘಟನೆ ಕೇರಳದ ಕಾಲಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹೇಶ್ ಕುಮಾರ್ (38) ಬಂಧಿತ ಆರೋಪಿ. ಮಹೇಶ್
ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.ಮೃತದೇಹದ ಮೇಲೆ ಸಿಕ್ಕ ಪುರುಷ ದೇಹದ ದ್ರವದ ಆಧಾರದ ಮೇಲೆ ಮಹೇಶ್ ಕೊಲೆ ಮಾಡಿದ್ದಾನೆಂದು ಪತ್ತೆಹಚ್ಚಲಾಗಿದೆ.
ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿ ಮಹೇಶ್, ಕಾಲಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದರೆ, ಇದಕ್ಕೂ ಮುನ್ನವೇ ಆತ ಪತ್ನಿಯನ್ನು ಕೊಲೆ ಮಾಡಿದ್ದ ಎನ್ನುವುದು ಬಹಿರಂಗವಾಗಿದೆ.
ನಾಪತ್ತೆ ಕೇಸ್ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ
ಹತ್ತಿರದ ತೋಟದಲ್ಲೇ ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಮಹಿಳೆಯ ಮೃತದೇಹ ಸಿಕ್ಕಿದೆ.
ಇದಾದ ಬಳಿಕ ಮಹೇಶ್ ಮೇಲೆ ಅನುಮಾನಗೊಂಡ ಪೊಲೀಸರು ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.