BIG NEWS ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ನವಜಾತ ಶಿಶು ಸಾವು; ಮನನೊಂದು 7 ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ನವಜಾತ ಶಿಶು ಸಾವು;ಮನನೊಂದು 7 ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ತಿರುವನಂತಪುರಂ:ಶಿಶು ಸಾವಿನಿಂದ ಕಂಗೆಟ್ಟ ತಾಯಿ ತನ್ನ ಹಿರಿಯ ಮಗನ ಜೊತೆ ಇಂದು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ.

ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್‌ನ ಕೈತಪಥಲ್‌ನ ನಿವಾಸಿ ಲಿಜಿ (38) ಮತ್ತು ಅವರ ಮಗ ಬೆನ್ ಟಾಮ್ (7) ಮೃತರು.ಇಡುಕ್ಕಿಯ ಪೂಪ್ಪಾರ ಬಳಿಯ ಲಿಜಿ ಅವರ ಮನೆಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಮೊನ್ನೆ ದಿನ ಲಿಜಿಯ 28 ದಿನದ ಮಗು ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಸಾವನ್ನಪ್ಪಿತ್ತು. ತನ್ನ ನವಜಾತ ಶಿಶುವಿನ ಸಾವಿನಿಂದ ಲಿಜಿ ತೀವ್ರವಾಗಿ ನೊಂದಿದ್ದಳು. ಬುಧವಾರ ಮಗುವಿನ ಅಂತ್ಯಕ್ರಿಯೆ ನಡೆಸಲಾಗಿತ್ತು.

ಗುರುವಾರ ಬೆಳಿಗ್ಗೆ ಎಲ್ಲಾ ಸಂಬಂಧಿಕರು ಚರ್ಚ್‌ಗೆ ಹೋದಾಗ ಲಿಜಿ ಮತ್ತು ಅವರ ಮಗ ಮನೆಗೆ ಬಂದಿದ್ದರು. ಸಂಬಂಧಿಕರು ಲಿಜಿ ಮನೆಗೆ ನೋಡಿದಾಗ ಮನೆಯಲ್ಲಿ ಇಬ್ಬರೂ ಕಾಣಲಿಲ್ಲ. ನಂತರ ನಡೆದ ಹುಡುಕಾಟ ಮಾಡಿದಾಗ ಅವರ ಮೃತದೇಹಗಳು ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿತ್ತು.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

ಮುಸ್ಲಿಮರ ವಿವಾಹ ನೋಂದಣಿಗೆ ವಕ್ಫ್ ಮಂಡಳಿಗೆ ಅನುಮತಿ ನೀಡಿದ ರಾಜ್ಯ ಸರಕಾರ; ವಿವಾಹ ಸರ್ಟಿಫಿಕೇಟ್ ಪಡೆಯಲು ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ…

ಮಂಗಳೂರು;ಮುಸ್ಲಿಮ್ ಜೋಡಿಯ ವಿವಾಹ ನೋಂದಣಿ ಮಾಡಲು ರಾಜ್ಯ ವಕ್ಫ್ ಮಂಡಳಿಗೆ ರಾಜ್ಯ ಸರ್ಕಾರ

Developed by eAppsi.com