ಕೇರಳದಲ್ಲಿ ಭೀಕರ ದುರಂತ; ಜೀಪು ಕಮರಿಗೆ ಬಿದ್ದು 9 ಮಂದಿ ದುರ್ಮರಣ

ವಯನಾಡು: ಇಲ್ಲಿನ ಮಾನಂತವಾಡಿಯ ತಾವಿನ್ಹಾಲ್ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ 12 ಜನರನ್ನು ಹೊತ್ತೊಯ್ಯುತ್ತಿದ್ದ ಜೀಪು ಕಮರಿಗೆ ಬಿದ್ದಿದೆ.

ವರದಿಗಳ ಪ್ರಕಾರ, ಒಂಬತ್ತು ಜನರು ಮೃತಪಟ್ಟಿದ್ದು ಮಾನಂತವಾಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆತರಲಾಗಿದೆ. ಜೀಪು ಚಾಲಕ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಸಂಖ್ಯೆಯನ್ನು ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರು ತೋಟದ ಕಾರ್ಮಿಕರು ಎಂದು ವರದಿಯಾಗಿದೆ. ಮಧ್ಯಾಹ್ನ 3:30ರ ಸುಮಾರಿಗೆ ಕಾರ್ಮಿಕರು ಮನೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್